ADVERTISEMENT

ಲಂಚ, ವಂಚನೆ ಆರೋಪ: ಶೇ 15ರಷ್ಟು ಕರಗಿದ ಅದಾನಿ ಆಸ್ತಿ ಮೌಲ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2024, 10:51 IST
Last Updated 21 ನವೆಂಬರ್ 2024, 10:51 IST
<div class="paragraphs"><p>ಗೌತಮ್ ಅದಾನಿ</p></div>

ಗೌತಮ್ ಅದಾನಿ

   

–ರಾಯಿಟರ್ಸ್ ಚಿತ್ರ

ಬೆಂಗಳೂರು: ವಂಚನೆ ಹಾಗೂ ಲಂಚ ಪ್ರಕರಣದಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯ ದೋಷಾರೋಪ ಹೊರಿಸಿದೆ. ಬೆನ್ನಲ್ಲೇ ಗೌತಮ್ ಅದಾನಿ ಆಸ್ತಿ ಮೌಲ್ಯದಲ್ಲಿ $10 ಬಿಲಿಯನ್ (ಸುಮಾರು ₹84.51 ಸಾವಿರ ಕೋಟಿ) ಇಳಿಕೆಯಾಗಿದೆ ಎಂದು ‘ಫೋರ್ಬ್ಸ್’ ವರದಿ ಮಾಡಿದೆ.

ADVERTISEMENT

ಇದು ಅವರ ಒಟ್ಟು ಆಸ್ತಿಯ ಶೇ 15ಕ್ಕೆ ಸಮ. ಸದ್ಯ ಅವರ ಆಸ್ತಿ ಮೌಲ್ಯ $58.5 ಬಿಲಿಯನ್ ಡಾಲರ್ (₹49.43 ಲಕ್ಷ ಕೋಟಿ).

ಫೋರ್ಬ್ಸ್‌ನ ಜಾಗತಿಕ ಧನಿಕರ ಪಟ್ಟಿಯಲ್ಲಿ ಅದಾನಿ 22ರಿಂದ 25ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಶ್ರೀಮಂತರ ಪೈಕಿ ಎರಡನೇ ಸ್ಥಾನದಲ್ಲಿ ಮುಂದುವರಿದ್ದಾರೆ.

ಅದಾನಿ ಗ್ರೀನ್‌ನ ಷೇರುಗಳು ಶೇ 16ರಷ್ಟು ಇಳಿಕೆ ಕಂಡಿವೆ. ಅದಾನಿ ಎಂಟರ್‌ಪ್ರೈಸಸ್‌ನ ಷೇರು ಶೇ 10ಕ್ಕಿಂತ ಅಧಿಕ ಇಳಿಕೆ ಕಂಡಿದೆ. ಅದಾನಿ ಡಾಲರ್ ಬಾಂಡ್‌ಗಳ ದರ ಇಳಿಕೆ ಕಂಡಿದೆ.

ಅಮೆರಿಕ ನ್ಯಾಯಾಲಯದ ದೋಷಾರೋಪವನ್ನು ನಿರಾಕರಿಸಿರುವ ಅದಾನಿ ಸಮೂಹವು, ‘ನಿರ್ದೇಶಕರ ಮೇಲಿನ ಆರೋಪಗಳು ಆಧಾರ ರಹಿತವಾಗಿದ್ದು, ಅವುಗಳನ್ನು ನಿರ್ಲಕ್ಷಿಸಬೇಕು’ ಎಂದು ಹೇಳಿದೆ. ಅಲ್ಲದೆ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.‌

ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್‌ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಒಳಗೊಂಡಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಹೊರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.