ನವದೆಹಲಿ: ಬಿಎಸ್‌ಎನ್‌ಎಲ್ ಕಂಪನಿಯು ಡಿಸೆಂಬರ್ ವೇಳೆಗೆ ಸಣ್ಣ ಪ್ರಮಾಣದಲ್ಲಿ 4ಜಿ ಸೇವೆಗಳನ್ನು ಆರಂಭಿಸಲಿದ್ದು, ಮುಂದಿನ ವರ್ಷದ ಜೂನ್ ವೇಳೆಗೆ ದೇಶದಾದ್ಯಂತ ಸೇವೆಯು ಲಭ್ಯವಾಗುವಂತೆ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಪಿ.ಕೆ. ಪುರ್ವಾರ್ ತಿಳಿಸಿದ್ದಾರೆ. ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಮಾತನಾಡಿದ ಅವರು, ಜೂನ್ ಬಳಿಕ 5ಜಿ ಸೇವೆಗಳಿಗೆ ಅಪ್‌ಗ್ರೇಡ್ ಆಗುವ ಯೋಜನೆ ಹೊಂದಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.