ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಗೆ (ಪಿಎಂಎಂವೈ) ₹ 500 ಕೋಟಿ ಮೀಸಲಿಡಲಾಗಿದೆ. ಕಳೆದ ಎರಡೂ ಬಜೆಟ್‌ಗಳಲ್ಲಿ ಇಷ್ಟೇ ಅನುದಾನವನ್ನು ನೀಡಲಾಗಿತ್ತು.
ಕಿರು ವಾಣಿಜ್ಯೋದ್ಯಮಿಗಳಿಗೆ ಸಾಲ ಸೌಲಭ್ಯವನ್ನು ರೂಪಿಸಿ, ನಿರ್ವಹಿಸುವ ಹೊಣೆ ಈ ಯೋಜನೆಯದ್ದಾಗಿದೆ.2015ರ ಏಪ್ರಿಲ್‌ನಲ್ಲಿ ಆರಂಭವಾದ ಯೋಜನೆಯ ಮೂಲಕ ಶಿಶು (₹ 50,000), ಕಿಶೋರ್ (₹5000– 5 ಲಕ್ಷ) ಮತ್ತು ತರುಣ್ (₹ 5 ಲಕ್ಷ– 10 ಲಕ್ಷ) ಮಾದರಿಯಲ್ಲಿ ನವೋದ್ಯಮಿಗಳಿಗೆ ₹ 10 ಲಕ್ಷ ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. 5.54 ಕೋಟಿ ಹೊಸ ನವೋದ್ಯಮಿಗಳು ಈ ಯೋಜನೆಯಿಂದ ಸಾಲ ಪಡೆದಿದ್ದಾರೆ.
2014ರಿಂದ ಪ್ರಸಕ್ತ ಸಾಲಿನವರೆಗೆ 27,000 ನವೋದ್ಯಮಗಳು ಆರಂಭವಾಗಿವೆ. ಮುದ್ರಾ ಯೋಜನೆಯಿಂದ 2 ಮತ್ತು 3ನೇ ಹಂತದ ನಗರಗಳ ಕಿರು ವಾಣಿಜ್ಯೋದ್ಯಮಿಗಳಿಗೆ ಅನುಕೂಲವಾಗಿದ್ದು,ಭಾರತವನ್ನು 2024ರ ವೇಳೆಗೆ ₹350 ಲಕ್ಷ ಕೋಟಿ ಅರ್ಥವ್ಯವಸ್ಥೆಯನ್ನಾಗಿ ರೂಪಿಸಲು ಈ ನಗರಗಳ ಕೊಡುಗೆ ಪ್ರಮುಖವಾದುದು ಎಂದು ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.