ADVERTISEMENT

Union Budget 2024 | ಇದು ಕೇಂದ್ರದ ವಿದಾಯ ಬಜೆಟ್: ಅಖಿಲೇಶ್ ಯಾದವ್‌ ವ್ಯಂಗ್ಯ

ಪಿಟಿಐ
Published 1 ಫೆಬ್ರುವರಿ 2024, 11:16 IST
Last Updated 1 ಫೆಬ್ರುವರಿ 2024, 11:16 IST
ಅಖಿಲೇಶ್ ಯಾದವ್‌
ಅಖಿಲೇಶ್ ಯಾದವ್‌   

ಲಖನೌ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿರುವ 2024–25ನೇ ಸಾಲಿನ ಮಧ್ಯಂತರ ಬಜೆಟ್‌ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಧ್ಯಂತರ ಬಜೆಟ್‌ ಮಂಡಿಸಿದರು. ಅವರು ಕೇವಲ 59 ನಿಮಿಷಗಳಲ್ಲಿ ಬಜೆಟ್‌ ಮಂಡನೆ ಮಾಡಿದರು. 

ಈ ಬಜೆಟ್‌ ಬಗ್ಗೆ ಅಖಿಲೇಶ್‌ ಯಾದವ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು ‘ಇದು ಬಿಜೆಪಿ ಸರ್ಕಾರದ ವಿದಾಯ ಬಜೆಟ್‌‘ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಬಿಜೆಪಿ ಸರ್ಕಾರ ಒಂದು ದಶಕದಿಂದ ಜನ ವಿರೋಧಿ ಬಜೆಟ್‌ಗಳನ್ನು ಮಂಡಿಸುವ ಮೂಲಕ ದಾಖಲೆಯನ್ನು ಬರೆದಿದೆ. ಇದೀಗ ಈ ದಾಖಲೆ ಮುರಿಯುವ ಸಮಯ ಬಂದಿದೆ. ಕೇಂದ್ರದಲ್ಲಿ ಒಳ್ಳೆಯ ಸರ್ಕಾರ ರಚನೆ ಮಾಡುವ ಕಾಲ ಬಂದಿದೆ. ಇದು ಬಿಜೆಪಿಯ ವಿದಾಯದ ಬಜೆಟ್ ಎಂದು ಅವರು ಬರೆದುಕೊಂಡಿದ್ದಾರೆ. 

ಆದಾಗ್ಯೂ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಧ್ಯಂತರ ಬಜೆಟ್ ಅನ್ನು ವಿಕಸಿತ ಭಾರತದ ದೃಷ್ಟಿಕೋನ ಬಜೆಟ್‌ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.