ADVERTISEMENT

Union Budget 2021: ರಕ್ಷಣಾ ವಿಭಾಗಕ್ಕೆ ₹4.78 ಲಕ್ಷ ಕೋಟಿ ಮೀಸಲು

ಪಿಟಿಐ
Published 1 ಫೆಬ್ರುವರಿ 2021, 12:33 IST
Last Updated 1 ಫೆಬ್ರುವರಿ 2021, 12:33 IST
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್   

ನವದೆಹಲಿ: ಪಿಂಚಣಿ ಪಾವತಿ ಸೇರಿದಂತೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಿಭಾಗದ ಬಜೆಟ್ ಮೊತ್ತವನ್ನು ₹4.78 ಲಕ್ಷ ಕೋಟಿಗಳಿಗೆ ಹೆಚ್ಚಿಸಲಾಗಿದೆ.

ಸೋಮವಾರ ಸಂಸತ್ತಿನಲ್ಲಿ ಕೇಂದ್ರ ಹಣಕಾಸು 2021-22ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಬಾಷಣದಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದರು.

ಕಳೆದ ವರ್ಷ ರಕ್ಷಣಾ ಕ್ಷೇತ್ರಕ್ಕೆ ₹4.71 ಲಕ್ಷ ಕೋಟಿ ವಿನಿಯೋಗಿಸಲಾಗಿತ್ತು. ಇದರೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಬಜೆಟ್ ಗಾತ್ರ ಹಿಗ್ಗಿಸಲಾಗಿದೆ.

ADVERTISEMENT

ಪಿಂಚಣಿ ಪಾವತಿಯನ್ನು ಹೊರತುಪಡಿಸಿದರೆ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಿಭಾಗದಲ್ಲಿ ₹3.62 ಲಕ್ಷ ಕೋಟಿಯನ್ನು ಮೀಸಲಿರಿಸಲಾಗಿದೆ.

ಈ ಪೈಕಿ ಹೊಸ ಶಸ್ತ್ರಾಸ್ತ್ರ, ವಿಮಾನ, ಯುದ್ಧ ನೌಕೆ ಹಾಗೂ ಮಿಲಿಟರಿ ಹಾರ್ಡ್‌ವೇಡ್ ಖರೀದಿಗಾಗಿ ₹1.35 ಲಕ್ಷ ಕೋಟಿ ವಿನಿಯೋಗಿಸಲಾಗುವುದು. ಕಳೆದ ಬಾರಿಯಿದು ₹1.13 ಲಕ್ಷ ಕೋಟಿಗಳಾಗಿತ್ತು.

ಸಂಬಳ ಪಾವತಿ, ನಿರ್ವಹಣೆ ಒಳಗೊಂಡಂತೆ ಒಟ್ಟು ಆದಾಯ ವೆಚ್ಚ ₹3.37 ಲಕ್ಷ ಕೋಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.