ಬೆಂಗಳೂರು: ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮದ ಬಲವರ್ಧನೆಯತ್ತ ಬಜೆಟ್‌ನಲ್ಲಿ ಚಿತ್ತ ಹರಿಸಲಾಗಿದೆ.
*ಹಂಪಿ–ಬಾದಾಮಿ–ಐಹೊಳೆ–ಪಟ್ಟದಕಲ್ಲು–ವಿಜಯಪುರ ಹಾಗೂ ಮೈಸೂರು–ಶ್ರೀರಂಗಪಟ್ಟಣ–ಬೇಲೂರು–ಹಳೆಬೀಡು ಪ್ರವಾಸಿ ವೃತ್ತಗಳ ಅಭಿವೃದ್ಧಿಗೆ ಕ್ರಮ.
*ಬೇಲೂರು, ಹಳೆಬೀಡು, ಸೋಮನಾಥಪುರ ಸೇರಿದಂತೆ ಇತರೆಡೆ ಇರುವ ಹೊಯ್ಸಳರ ಸ್ಮಾರಕಗಳನ್ನುಪ್ರಸಕ್ತ ಸಾಲಿನಲ್ಲೇ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ. *ಜೋಗ ಜಲಪಾತದಲ್ಲಿ ಅಂದಾಜು ₹116 ಕೋಟಿ ವೆಚ್ಚದಲ್ಲಿ ಹೋಟೆಲ್ ಹಾಗೂ ರೋಪ್‌ವೇ ಅಭಿವೃದ್ಧಿ.
*ನಂದಿ ಬೆಟ್ಟದಲ್ಲಿ ₹93 ಕೋಟಿ ವೆಚ್ಚದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಅನುಮೋದನೆ. ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಕ್ರಮ.
*ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ₹100 ಕೋಟಿ.
*ಪರ್ವತ ಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟ ಹಾಗೂ ಮುಳ್ಳಯ್ಯನಗಿರಿಯ ದತ್ತಪೀಠದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ.
*ಕಡಲತೀರದ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸಿ.ಆರ್.ಜೆಡ್ ಮಾನದಂಡ ಸಡಿಲಿಸುವಂತೆ ಕೇಂದ್ರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಕ್ರಮ.
*ತದಡಿ ಬಂದರಿನಲ್ಲಿ ಸಮಗ್ರ ಪರಿಸರ–ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ.
*ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ.
*ರಾಜ್ಯದ ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ‘ಅಡಾಪ್ಟ್ ಮಾನುಮೆಂಟ್’ ಯೋಜನೆ.
*ಶ್ರೀಶೈಲದಲ್ಲಿ ₹85 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣ. ಮೊದಲ ಹಂತದ ಕಾಮಗಾರಿಗೆ ₹45 ಕೋಟಿ.
*ಪುಣ್ಯಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಕೆ.ಎಸ್.ಟಿ.ಡಿ.ಸಿ. ವತಿಯಿಂದ ಕಾರ್ಯಕ್ರಮ.
*ಕಾಶಿ ಯಾತ್ರೆ ಕೈಗೊಳ್ಳುವ ಸುಮಾರು 30 ಸಾವಿರ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ ₹5 ಸಾವಿರ ಸಹಾಯಧನ.
*ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಕೊಲ್ಲೂರು, ಕಾಶಿ, ತಿರುಪತಿ, ಮಂತ್ರಾಲಯ ಸೇರಿ ಇತರೆ ಸ್ಥಳಗಳಿಗೆ ಪ್ಯಾಕೇಜ್ ಟ್ರಿಪ್ ಸೇವೆ.
*ಬೆಳಗಾವಿಯ ಹಿಡ್ಕಲ್ ಅಣೆಕಟ್ಟು ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಪಕ್ಷಿಧಾಮ ಹಾಗೂ ಚಿಟ್ಟೆಗಳ ಉದ್ಯಾನ ಸ್ಥಾಪನೆ.
*ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ 400 ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ ₹2 ಸಾವಿರ ಪ್ರೋತ್ಸಾಹ ಧನ. ಅವರಿಗೆ ಸಂವಹನ ಕೌಶಲ್ಯ ತರಬೇತಿ ನೀಡಲು ಕ್ರಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.