ADVERTISEMENT

ಬಜೆಟ್‌ 2021ರಲ್ಲಿ ಏನೆಲ್ಲ ಇರಲೇಬೇಕು?– ರಾಹುಲ್‌ ಗಾಂಧಿ ನೀಡಿದ 3 ಅಂಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2021, 5:30 IST
Last Updated 1 ಫೆಬ್ರುವರಿ 2021, 5:30 IST
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೋಮವಾರ 2021–22ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. 'ಬಜೆಟ್‌ನಲ್ಲಿ ಏನಿರಲಿದೆ' ಎಂದು ಊಹಿಸುವ ಲೆಕ್ಕಾಚಾರಗಳು ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಎಂದೂ ಕಂಡು ಕೇಳರಿಯದ ಬಜೆಟ್‌ಗಾಗಿ ಕುತೂಹಲದಿಂದ ಬಹಳಷ್ಟು ಜನ ಎದುರು ನೋಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಬಜೆಟ್‌ನಲ್ಲಿ ಏನು ಇರಲೇಬೇಕು ಎಂಬುದನ್ನು ಪ್ರಸ್ತಾಪಿಸಿದ್ದಾರೆ.

ಬಜೆಟ್‌ ಮಂಡನೆಗೂ ಕೆಲವೇ ನಿಮಿಷಗಳ ಮುಂಚೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ಬಜೆಟ್‌ 2021ರಲ್ಲಿ ಸೇರಿರಲೇಬೇಕಾದ ಮೂರು ಅಂಶಗಳನ್ನು ಪ್ರಕಟಿಸಿದ್ದಾರೆ.

* ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಿಗೆ (ಎಂಎಸ್‌ಎಂಇ) ಬೆಂಬಲ, ರೈತರು ಮತ್ತು ಕೆಲಸಗಾರರಿಗೆ ಬೆಂಬಲಿಸುವ ಮೂಲಕ ಉದ್ಯೋಗ ಸೃಷ್ಟಿಸುವುದು
* ಜೀವಗಳ ರಕ್ಷಣೆಗಾಗಿ ಆರೋಗ್ಯ ಸುರಕ್ಷತೆ ವಲಯಕ್ಕಾಗಿ ಖರ್ಚು ಹೆಚ್ಚಿಸುವುದು
* ದೇಶದ ಗಡಿಗಳ ರಕ್ಷಣೆಗಾಗಿ ರಕ್ಷಣಾ ವಲಯಕ್ಕೆ ವೆಚ್ಚ ಹೆಚ್ಚಿಸುವುದು

ADVERTISEMENT

– ಇವುಗಳು ಬಜೆಟ್‌ 2021ರಲ್ಲಿ ಆಗಲೇಬೇಕು ಎಂದು ರಾಹುಲ್‌ ಗಾಂಧಿ ಟ್ವೀಟಿಸಿದ್ದಾರೆ.

ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್‌ನ್ನು ಭೌತಿಕವಾಗಿ ಮುದ್ರಿಸದೆ, ಡಿಜಿಟಲ್‌ ರೂಪದಲ್ಲಿ ಮಂಡಿಸಲಾಗುತ್ತಿದೆ. ನಿರ್ಮಲಾ ಸೀತಾರಾಮ್‌ ಅವರು ಬಜೆಟ್‌ ಮುದ್ರಣ ಪ್ರತಿಯ ಬದಲು ಟ್ಯಾಬ್‌ ಹಿಡಿದು ಬಜೆಟ್‌ ಮಂಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.