ADVERTISEMENT

ಬಂದರುಗಳಿಗೆ ಕಾರ್ಪೊರೆಟ್ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 20:00 IST
Last Updated 1 ಫೆಬ್ರುವರಿ 2020, 20:00 IST
FILE PHOTO - A general view of a container terminal is seen at Mundra Port in the western Indian state of Gujarat, India April 1, 2014. REUTERS/Amit Dave/File Photo
FILE PHOTO - A general view of a container terminal is seen at Mundra Port in the western Indian state of Gujarat, India April 1, 2014. REUTERS/Amit Dave/File Photo   

ದೇಶದ ಬಂದರುಗಳಲ್ಲಿ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಅವುಗಳಿಗೆ ಕಾರ್ಪೊರೆಟ್ ಸ್ಪರ್ಶ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಆದರೆ ಬಂದರುಗಳ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಸಾಗರಮಾಲಾ’ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ.

*ಬಂದರುಗಳ ಅಭಿವೃದ್ಧಿಗೆ ಸದ್ಯದಲ್ಲೇ ಕಾರ್ಯಯೋಜನೆ ಪ್ರಕಟ

*ಯಾಂತ್ರೀಕರಣ, ಡಿಜಿಟಲೀಕರಣ, ಸಂಸ್ಕರಣೆ ಸರಳೀಕರಣದ ಮೂಲಕ ಬಂದರುಗಳ ಕಾರ್ಯಕ್ಷಮತೆ ಹೆಚ್ಚಳ

ADVERTISEMENT

*ಒಳನಾಡು ಜಲ ಸಾರಿಗೆ ಅಭಿವೃದ್ಧಿಗೆ ಒತ್ತು

ಕಡಲ ವಸ್ತುಸಂಗ್ರಹಾಲಯ:ದೇಶದ ಅತ್ಯಂತ ಪುರಾತನ ಬಂದರು ಎಂದು ಗುರುತಿಸಲಾಗಿರುವ ಗುಜರಾತಿನ ಲೋಥಲ್‌ನಲ್ಲಿ ಕಡಲ ವಸ್ತುಸಂಗ್ರಹಾಲಯ ನಿರ್ಮಾಣವಾಗಲಿದೆ. ಪೋರ್ಚುಗಲ್‌ನ ಮೆರಿಟೈಮ್ ಹೆರಿಟೇಜ್ ಮ್ಯೂಸಿಯಂನಿಂದ ತಾಂತ್ರಿಕ ಸಹಾಯ ಪಡೆಯಲು ತೀರ್ಮಾನಿಸಲಾಗಿದೆ.

151.4 ಕೋಟಿ ಟನ್:ದೇಶದ ಬಂದರುಗಳ ಸರಕು ಸಾಗಣೆ ನಿರ್ವಹಣೆ ಸಾಮರ್ಥ್ಯ/ವಾರ್ಷಿಕ

12:ದೇಶದ ಪ್ರಮುಖ ಬಂದರುಗಳ ಸಂಖ್ಯೆ

ಸಾಗರಮಾಲಾ ಯೋಜನೆ ಅನುದಾನ

ಅಂದಾಜು 2020-21;₹550 ಕೋಟಿ

ಪರಿಷ್ಕರಣೆ 2020-21;₹297 ಕೋಟಿ

ಅಂದಾಜು 2019–20;₹381 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.