ADVERTISEMENT

ಆರ್ಥಿಕ ಸಮೀಕ್ಷೆ ವರದಿ ಇಂದು ಮಂಡನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 7:38 IST
Last Updated 29 ಜನವರಿ 2021, 7:38 IST
   

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯ ಸ್ಥಿತಿಗತಿಯನ್ನು ತಿಳಿಸುವ ಆರ್ಥಿಕ ಸಮೀಕ್ಷೆ ವರದಿ ಸಂಸತ್ತಿನಲ್ಲಿ ಶುಕ್ರವಾರ ಮಂಡನೆ ಆಗಲಿದೆ. ಬಜೆಟ್‌ನಲ್ಲಿ ಒಂದು ವರ್ಷದ ನೀತಿಯನ್ನು ಮಾತ್ರ ಹೇಳುವುದಲ್ಲದೆ, ಅರ್ಥ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಲು ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಏನು ಮಾಡಬೇಕು ಎಂಬುದನ್ನು ಹೇಳುವಂತೆಯೂ ಸಮೀಕ್ಷಾ ವರದಿಯು ಸರ್ಕಾರಕ್ಕೆ ಸಲಹೆ ನೀಡುವ ನಿರೀಕ್ಷೆ ಇದೆ.

ಅರ್ಥ ವ್ಯವಸ್ಥೆಯ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಉದ್ಯೋಗ ಸೃಷ್ಟಿ ಹೇಗೆ ಎಂಬ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ವಿವರಗಳು ಇರುವ ನಿರೀಕ್ಷೆ ಇದೆ. ಸಮೀಕ್ಷೆಯ ವರದಿಯಲ್ಲಿನ ಅಂಶಗಳು ಅರ್ಥ ವ್ಯವಸ್ಥೆಯ ಪುನರ್‌ ನಿರ್ಮಾಣಕ್ಕೆ ಮುಂದಡಿ ಇರಿಸುವುದು ಹೇಗೆ ಎಂಬ ಬಗ್ಗೆ ನೀತಿ ನಿರೂಪಕರಿಗೆ ದಾರಿದೀಪ ಆಗಲಿವೆ.

2024–25ರ ಸುಮಾರಿಗೆ ಭಾರತವನ್ನು ಐದು ಶತಕೋಟಿ ಡಾಲರ್‌ ಅರ್ಥವ್ಯವಸ್ಥೆಯನ್ನಾಗಿ ಮಾಡಲು ಸರ್ಕಾರ ಆದ್ಯತೆ ನೀಡಬೇಕಿರುವ ಕ್ಷೇತ್ರಗಳು ಯಾವುವು ಎಂಬ ಸಲಹೆಯನ್ನು ಸಮೀಕ್ಷೆಯು ನೀಡಲಿದೆ. ಇದೇ ಮೊದಲ ಬಾರಿಗೆ ಸಮೀಕ್ಷೆಯ ವರದಿಯನ್ನು ಬಜೆಟ್ ಮಂಡನೆಗೂ ಎರಡು ದಿನ ಮೊದಲು ಮಂಡಿಸಲಾಗುತ್ತಿದೆ. ಸಾಮಾನ್ಯವಾಗಿ, ಬಜೆಟ್ ಹಿಂದಿನ ದಿನ ಈ ವರದಿಯನ್ನು ಮಂಡಿಸಲಾಗುತ್ತಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.