ADVERTISEMENT

ನಿರ್ಮಲಾ ಸೀತಾರಾಮನ್‌ ಮಂಡಿಸಿದ 6ನೇ ಬಜೆಟ್‌ನ ಬೆನ್ನೆಲುಬು ಇವರು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2024, 11:24 IST
Last Updated 1 ಫೆಬ್ರುವರಿ 2024, 11:24 IST
<div class="paragraphs"><p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸಚಿವರಾದ ಪಂಕಜ್ ಚೌಧರಿ ಮತ್ತು ಭಾಗವತ್ ಕರದ್ ಮತ್ತು ಅವರ ಅಧಿಕಾರಿಗಳ ತಂಡದೊಂದಿಗೆ ಕಾಣಿಸಿಕೊಂಡರು</p></div>

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸಚಿವರಾದ ಪಂಕಜ್ ಚೌಧರಿ ಮತ್ತು ಭಾಗವತ್ ಕರದ್ ಮತ್ತು ಅವರ ಅಧಿಕಾರಿಗಳ ತಂಡದೊಂದಿಗೆ ಕಾಣಿಸಿಕೊಂಡರು

   

ಪಿಟಿಐ ಚಿತ್ರ

ನವದೆಹಲಿ: ಲೋಕಸಭಾ ಚುನವಾಣೆಯ ಹೊಸ್ತಿಲಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024–25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. 

ADVERTISEMENT

ಮಧ್ಯಂತರ ಬಜೆಟ್‌ ತಯಾರಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಸತತ 6ನೇ ಬಾರಿಗೆ ಬಜೆಟ್ (ಮಧ್ಯಂತರ ಸೇರಿ) ಮಂಡಿಸಿದ ಹೆಗ್ಗಳಿಕೆ ನಿರ್ಮಲಾ ಅವರದ್ದು. ಈ ಮುಂಚೆ ಹೇಳಿದಂತೆ ಯಾವುದೇ ಹೊಸ ಯೋಜನೆಯ ಘೋಷಣೆಗಳನ್ನು ಮಾಡದೆ, ಯುವಕರು, ಮಹಿಳೆಯರು, ರೈತ, ಬಡವರನ್ನು ಕೇಂದ್ರೀಕರಿಸಿ ಈಗಾಗಲೇ ಇರುವ ಯೋಜನೆಗಳಿಗೆ ಒತ್ತು ನೀಡಿದ್ದಾರೆ.

ಟಿ.ವಿ. ಸೋಮನಾಥನ್‌

ಟಿ.ವಿ.ಸೋಮನಾಥನ್‌ ಅವರು ಕೇಂದ್ರ ಸರ್ಕಾರದ ಹಣಕಾಸು ಕಾರ್ಯದರ್ಶಿ. ಜತೆಗೆ ವೆಚ್ಚ ಇಲಾಖೆಯ ಕಾರ್ಯದರ್ಶಿಯೂ ಹೌದು.  ತಮಿಳುನಾಡು ಕೆಡರ್‌ನ 1981ನೇ ತಂಡದ ಐಎಎಸ್‌ ಅಧಿಕಾರಿ. ಇವರು ಏಪ್ರಿಲ್‌ 2015ರಿಂದ ಆಗಸ್ಟ್‌ 2017ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿಯೂ ಕೆಲಸ ಮಾಡಿದ್ದಾರೆ.

ಇವರು ಹಣಕಾಸು ಹಂಚಿಕೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್‌ ಅವರಿಗೆ ಸಲಹೆ ನೀಡುತ್ತಾರೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಆತ್ಮನಿರ್ಭರ ಭಾರತ’ ಜಾರಿಯಲ್ಲಿ ಇವರು ಮಹತ್ವದ ಪಾತ್ರವಹಿಸಿದ್ದಾರೆ.

ವಿ.ಅನಂತ ನಾಗೇಶ್ವರನ್‌

ವಿ. ಅನಂತ ನಾಗೇಶ್ವರನ್ ಅವರು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ. ಈ ವರ್ಷದ ಕಿರು ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಭಾರತದ ಆರ್ಥಿಕತೆಯ ವಿಚಾರದ ಬಗ್ಗೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಲಹೆ ನೀಡಿದ್ದಾರೆ.

ಅಜಯ್‌ ಸೇಠ್

ಅಜಯ್‌ ಸೇಠ್‌ ಅವರು ಕರ್ನಾಟಕ ಕೆಡರ್‌ನ 1987ನೇ ತಂಡದ ಐಎಎಸ್‌ ಅಧಿಕಾರಿ. ಪ್ರಸ್ತುತ ಅವರು ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಭಾರತದ ಮೊದಲ ಹಸಿರು ಬಾಂಡ್ ವಿತರಣೆ ಮತ್ತು ಮೂಲಸೌಕರ್ಯ, ಹಣಕಾಸು ಸಚಿವಾಲಯದ ರಚನೆಯಂತಹ ಉಪಕ್ರಮಗಳ ಮುಖ್ಯಸ್ಥರಾಗಿದ್ದರು.

ಸಂಜಯ್‌ ಮಲ್ಹೋತ್ರಾ

ಸಂಜಯ್‌ ಮಲ್ಹೋತ್ರಾ ರಾಜಸ್ಥಾನ ಕೆಡರ್‌ನ 1990ನೇ ತಂಡದ ಐಎಎಸ್‌ ಅಧಿಕಾರಿ. ಪ್ರಸ್ತುತ ಆದಾಯ ತೆರಿಗೆ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಅವರು ಆದಾಯ ತೆರಿಗೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಸೀತಾರಾಮನ್ ಅವರ ಬಜೆಟ್ ಭಾಷಣದ ಎರಡನೇ ಭಾಗವನ್ನು ಅವರು (ಭಾಗ ಬಿ) ಸಿದ್ಧಪಡಿಸಿದ್ದಾರೆ

ತುಹಿನ್‌ ಕಾಂತ್‌ ಪಾಂಡೆ

ಸರ್ಕಾರದ ಹೂಡಿಕೆ ತಂತ್ರಗಳು ಮತ್ತು ನಿರ್ಧಾರಗಳನ್ನು ನಿರ್ಧರಿಸುವ ಉಸ್ತುವಾರಿ ತುಹಿನ್‌ ಕಾಂತ್‌ ಪಾಂಡೆ ಅವರದ್ದು. ಹಿಂದೆ, ಅವರು  ಏರ್ ಇಂಡಿಯಾವನ್ನು ಯಶಸ್ವಿಯಾಗಿ ಮಾರಾಟ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ವಿವೇಕ್‌ ಜೋಶಿ

ವಿವೇಕ್ ಜೋಶಿ ಅವರು ರಾಜ್ಯ-ಹಣಕಾಸು ಸಂಸ್ಥೆಗಳಿಗೆ ಸರ್ಕಾರದ ಸುಧಾರಣಾ ಕಾರ್ಯಸೂಚಿ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳು, ಯೋಜನೆಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅವರು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಂಡಳಿಯ ಸದಸ್ಯರೂ ಹೌದು. ಹಣಕಾಸು ಸೇವೆಗಳ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು, ಜೋಶಿ ಅವರು ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾಗಿದ್ದರು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.