ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸುತ್ತಿದ್ದಾರೆ.
ಕಳೆದ ವರ್ಷ, ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಅವರು, ಸಾಂಪ್ರದಾಯಿಕ ಮಾದರಿಯಬಜೆಟ್ ಭಾಷಣ ಪುಸ್ತಕದ ಬದಲಾಗಿ, ಟ್ಯಾಬ್ಲೆಟ್ ಹಿಡಿದು ಬಜೆಟ್ ಮಂಡಿಸಿದ್ದರು.
ಈ ಬಾರಿಯೂ, ಅದೇ ಮಾದರಿಯಲ್ಲಿ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ.
ಕೆಂಪು ಬಣ್ಣದ ಕವರ್‌ನಲ್ಲಿ ಬಜೆಟ್ ಭಾಷಣವಿರುವ ಟ್ಯಾಬ್ಲೆಟ್ ಹಿಡಿದುಕೊಂಡಿದ್ದ ಸಚಿವೆ ನಿರ್ಮಲಾ ಸೀತಾರಾಮನ್, ಅದನ್ನು ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮದವರೆದುರು ಪ್ರದರ್ಶಿಸಿದರು.
ಈ ಬಾರಿ ಕೋವಿಡ್ ನಿರ್ಬಂಧದ ಕಾರಣ, ಬಜೆಟ್ ಹಲ್ವ ಸಮಾರಂಭವನ್ನು ಕೂಡ ಮಾಡಿಲ್ಲ. ಹಲ್ವ ಸಮಾರಂಭವನ್ನು ಇದೇ ಮೊದಲ ಬಾರಿಗೆ ರದ್ದುಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.