ADVERTISEMENT

Union Budget 2024: ಸರ್ಕಾರದ 9 ಆದ್ಯತೆ ಕ್ಷೇತ್ರಗಳನ್ನು ಘೋಷಿಸಿದ ಹಣಕಾಸು ಸಚಿವೆ

ಪಿಟಿಐ
Published 23 ಜುಲೈ 2024, 6:37 IST
Last Updated 23 ಜುಲೈ 2024, 6:37 IST
   

ನವದೆಹಲಿ: ಆರ್ಥಿಕತೆಯಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲು 2024-25ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂಬತ್ತು ಆದ್ಯತೆ ಕ್ಷೇತ್ರಗಳನ್ನು ಘೋಷಿಸಿದ್ದಾರೆ.

9 ಆದ್ಯತೆ ಕ್ಷೇತ್ರಗಳ‌ಲ್ಲಿ ಉತ್ಪಾದಕತೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ,ನಾವೀನ್ಯತೆ ಮತ್ತು ಸುಧಾರಣೆಗಳು ಸೇರಿವೆ.

ಪ್ರಧಾನಿ ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್ ಮಂಡನೆಯಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.