ADVERTISEMENT

Budget 2024 | ಆದಾಯ ತೆರಿಗೆ ಕಾಯ್ದೆಯ ಸಮಗ್ರ ಪರಿಶೀಲನೆ: ನಿರ್ಮಲಾ

ಪಿಟಿಐ
Published 23 ಜುಲೈ 2024, 9:56 IST
Last Updated 23 ಜುಲೈ 2024, 9:56 IST
<div class="paragraphs"><p>ಆದಾಯ ತೆರಿಗೆ</p></div>

ಆದಾಯ ತೆರಿಗೆ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಆರು ತಿಂಗಳಲ್ಲಿ 'ಆದಾಯ ತೆರಿಗೆ ಕಾಯ್ದೆ 1961'ರ ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ADVERTISEMENT

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್‌ 2024ರಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

'ತೆರಿಗೆಯ ಸರಳೀಕರಣ ಮತ್ತು ತೆರಿಗೆ ಪಾವತಿದಾರರ ಸೇವೆಗಳ ಸುಧಾರಣೆಗೆ ಆದ್ಯತೆ ನೀಡಲಾಗುವುದು' ಎಂದು ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.

'2023ರ ಹಣಕಾಸು ವರ್ಷದಲ್ಲಿ ಸರಳೀಕೃತ ತೆರಿಗೆ ಪದ್ಧತಿಯಿಂದಾಗಿ ಶೇ 58ರಷ್ಟು ಕಾರ್ಪೋರೇಟ್ ತೆರಿಗೆ ಪಾವತಿಯಾಗಿದೆ' ಎಂದು ಅವರು ಹೇಳಿದ್ದಾರೆ.

'ಮೂರನೇ ಎರಡರಷ್ಟು ತೆರಿಗೆ ಪಾವತಿದಾರರು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಆಯ್ದುಕೊಂಡಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

'ಕ್ರೆಡಿಟ್, ಇ-ಕಾಮರ್ಸ್, ಶಿಕ್ಷಣ, ಆರೋಗ್ಯ, ಕಾನೂನು, ಎಂಎಸ್‌ಎಂಇ ಸರ್ವಿಸ್ ಮತ್ತು ನಗರ ಆಡಳಿತಕ್ಕಾಗಿ ಡಿಪಿಐ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.