ADVERTISEMENT

Union Budget 2021 | ಸ್ವಾವಲಂಬಿ ಭಾರತಕ್ಕೆ ಪೂರಕ ಬಜೆಟ್: ಅಮಿತ್‌ ಶಾ

ಪಿಟಿಐ
Published 1 ಫೆಬ್ರುವರಿ 2021, 12:44 IST
Last Updated 1 ಫೆಬ್ರುವರಿ 2021, 12:44 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ‘2020–21ನೇ ಸಾಲಿನ ಬಜೆಟ್‌ ಎಲ್ಲರನ್ನೂ ಒಳಗೊಳ್ಳುವ ಜೊತೆಗೆ ‘ಸ್ವಾವಲಂಬಿ ಭಾರತ’ಕ್ಕೆ ಪೂರಕವಾಗಿದೆ’ ಎಂದು ಗೃಹ ಸಚಿವ ಅಮಿತ್‌ ಶಾ ಸೋಮವಾರ ಹೇಳಿದ್ದಾರೆ.

‘ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಈ ಬಜೆಟ್‌ ಮತ್ತಷ್ಟು ಬಲ ತುಂಬಿದೆ. ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕಶಕ್ತಿಯಾಗಿ ಹೊರಹೊಮ್ಮಲು ನೆರವಾಗಲಿದೆ’ ಎಂದು ಬಣ್ಣಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅತ್ಯುತ್ತಮ ಬಜೆಟ್‌ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

‘ಕೊರೊನಾ ವಿರುದ್ಧದ ಲಸಿಕೆಗಾಗಿ ₹ 35,000 ಕೋಟಿ ತೆಗೆದಿರಿಸಿರುವುದು ಶ್ಲಾಘನೀಯ. ಇದು ದೇಶವನ್ನು ಕೋವಿಡ್‌ ಮುಕ್ತವನ್ನಾಗಿ ಮಾಡುವ ಪ್ರಧಾನಿಯ ಬದ್ಧತೆಯನ್ನು ತೋರಿಸುತ್ತದೆ’ ಎಂದಿದ್ದಾರೆ.

ಇವುಗಳನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.