ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ 2023-24ರ ಕೇಂದ್ರ ಬಜೆಟ್‌ನಲ್ಲಿ ಒಟ್ಟು ₹18,050 ಕೋಟಿ ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ ₹17,250 ಕೋಟಿ ನೀಡಲಾಗಿತ್ತು. ಈ ಬಾರಿ ಸುಮಾರು ಶೇ.4.64ರಷ್ಟು ಹೆಚ್ಚಿನ ಅನುದಾನ ನೀಡಲಾಗಿದೆ.
ವಿವಿಧ ದೇಶಗಳಿಗೆ ₹5,408 ಕೋಟಿ ಅಭಿವೃದ್ಧಿ ನೆರವು ನೀಡಲು ನಿಗದಿ ಮಾಡಲಾಗಿದೆ. ಭಾರತದ ಜಿ20 ಅಧ್ಯಕ್ಷತೆಗೆ ₹990 ಕೋಟಿ ನೀಡಲಾಗಿದೆ.
ದೇಶ | ಮೀಸಲಿಟ್ಟ ಹಣ (ಕೋಟಿಗಳಲ್ಲಿ) |
---|---|
ಭೂತಾನ್ | ₹2400 |
ಅಫ್ಗಾನಿಸ್ತಾನ | ₹200 |
ಬಾಂಗ್ಲಾದೇಶ | ₹200 |
ನೇಪಾಳ | ₹550 |
ಶ್ರೀಲಂಕಾ | ₹150 |
ಮಾಲ್ಡೀವ್ಸ್ | ₹400 |
ಮ್ಯಾನ್ಮಾರ್ | ₹400 |
ಮಂಗೋಲಿಯಾ | ₹7 |
ಆಫ್ರಿಕಾ ರಾಷ್ಟ್ರಗಳು | ₹250 |
ಯುರೇಷಿಯಾ ರಾಷ್ಟ್ರಗಳು | ₹75 |
ಲ್ಯಾಟಿನ್ ಅಮೆರಿಕ ರಾಷ್ಟ್ರಗಳು | ₹50 |
ಅಭಿವೃದ್ಧಿ ಹೊಂದುತ್ತಿರುವ ಇತರೆ ರಾಷ್ಟ್ರಗಳು | ₹150 |
ವಿಪತ್ತು ಪರಿಹಾರ | ₹5 |
ಛಾಬರ್ ಬಂದರು | ₹100 |
ಮರುಷಿಯಸ್ | ₹460 |
ಸೆಶೇಲ್ಸ್ | ₹10 |
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.