* ಆಯವ್ಯಯ ಗಾತ್ರ (ಸಂಚಿತ ನಿಧಿ)- ₹3,09,182 ಕೋಟಿ
* ಒಟ್ಟು ಸ್ವೀಕೃತಿ- ₹3,03,910 ಕೋಟಿ
* ರಾಜಸ್ವ ಸ್ವೀಕೃತಿ ₹2,25,910 ಕೋಟಿ
* ಸಾರ್ವಜನಿಕ ಋಣ- ₹77,750 ಕೋಟಿ ಸೇರಿದಂತೆ ಬಂಡವಾಳ ಸ್ವೀಕೃತಿ ₹78,000 ಕೋಟಿ
ಒಟ್ಟು ವೆಚ್ಚ- ₹3,03,910 ಕೋಟಿ
* ರಾಜಸ್ವ ವೆಚ್ಚ- ₹2,25,507 ಕೋಟಿ
* ಬಂಡವಾಳ ವೆಚ್ಚ- ₹61,234 ಕೋಟಿ ಹಾಗೂ ಸಾಲ ಮರುಪಾವತಿ ₹22,441 ಕೋಟಿ.
* ಕೃಷಿ ಮತ್ತು ಪೂರಕ ಚಟುವಟಿಕೆ: 39,031 ಕೋಟಿ
* ಸರ್ವೋದಯ ಮತ್ತು ಕ್ಷೇಮಾಭಿವೃದ್ಧ: 80,318 ಕೋಟಿ
* ಆರ್ಥಿಕ ಅಭಿವೃದ್ಧಿ ಉತ್ತೇಜನ: 61,488 ಕೋಟಿ
* ಬೆಂಗಳೂರು ಸಮಗ್ರ ಅಭಿವೃದ್ಧಿ: ₹ 9,698 ಕೋಟಿ
* ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ: ₹ 3,458
* ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ: ₹ 68,585 ಕೋಟಿ
– ರಾಮನಗರದ ಮಂಚನಬೆಲೆ ಹಿನ್ನೀರಿನಲ್ಲಿ ₹ 10 ಕೋಟಿ ವೆಚ್ಚದಲ್ಲಿ ರೆಸಾರ್ಟ್ ನಿರ್ಮಾಣ
– ಪ್ರಾಣಿ ಸಂಘರ್ಷದಿಂದ ಪ್ರಾಣಹಾನಿ; ಪರಿಹಾರದ ಮೊತ್ತ ₹ 7.50 ಲಕ್ಷದಿಂದ ₹ 15 ಲಕ್ಷಕ್ಕೆ ಏರಿಕೆ
– ಬೋಳು ಗುಡ್ಡ ಪ್ರದೇಶ ಪುನಶ್ಚೇತನ, ಕಾಂಡ್ಲಾ ಅರಣ್ಯೀಕರಣ ಮತ್ತು ಶೆಲ್ಟರ್ ಬೆಲ್ಟ್ ನಿರ್ವಹಣೆ ಅಡಿ 3,211 ಹೆಕ್ಟೆರ್ ಪ್ರದೇಶ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ 168 ಉದ್ದದ ಅರಣ್ಯೀಕರಣ ಹಾಗೂ 25 ಲಕ್ಷ ಸಸಿ ನೆಡುವ ಯೋಜನೆ.
– ನೈಸರ್ಗಿಕ ಸಂಪನ್ಯೂಲಗಳ ರಕ್ಷಣಾ ವಲಯಕ್ಕೆ ₹ 3,458 ಕೋಟಿ ಅನುದಾನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್, ಬಿಸಿಲು ಕುದುರೆಯಿದ್ದಂತೆ. ಕಣ್ಣಿಗೂ ಕಾಣದು, ಯಾರ ಕೈಗೂ ಸಿಗದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯವರ ಡಬಲ್ ಇಂಜಿನ್ ಕೆಟ್ಟು ನಿಂತು ಹೊಗೆ ಬರುತ್ತಿದೆ. ಬೊಮ್ಮಾಯಿ ಅವರು ತಾವೂ ಒಂದು ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿಕೊಳ್ಳಲು ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ ಎಂದು ವ್ಯಂಗ್ಯವಾಡಿದ್ದರು.
ರಾಮನಗರದಲ್ಲಿ ರಾಮಮಂದಿರ ಕಟ್ಟುವುದಾಗಿ ತಿಳಿಸಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಮೊದಲು ಅವರ ಪಕ್ಷದ ಕಚೇರಿ ಕಟ್ಟಲು ಹೇಳಿ ಎಂದು ತಿರುಗೇಟು ನೀಡಿದರು.
– ಶಿಕ್ಷಣ ತೊರೆದ ಯುವಕರಿಗೆ 'ಬದುಕುವ ದಾರಿ' 3 ತಿಂಗಳ ಅವಧಿಯ ಐಟಿಐ ಸರ್ಟಿಫಿಕೇಟ್ ಕೋರ್ಸ್ ಹಾಗೂ ₹ 1,500 ಶಿಷ್ಯ ವೇತನ
– ಪದವಿ ಮುಗಿಸಿ ಮೂರು ವರ್ಷದ ಬಳಿಕವೂ ಉದ್ಯೋಗ ಸಿಗದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಕೊಳ್ಳುವುದನ್ನು ಪ್ರೋತ್ಸಾಹಿಸಲು ಒಂದು ಬಾರಿ ₹ 2 ಸಾವಿರ ಆರ್ಥಿಕ ನೆರವು
– ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಕ್ರೀಡಾಂಗಣಗಳಲ್ಲಿ ಜಿಮ್ ಸ್ಥಾಪಿಸಲು ₹ 100 ಕೋಟಿ ಅನುದಾನ
– ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ತಯಾರಿ ಉದ್ದೇಶದಿಂದ ನೊಂದಾಯಿತ ಕ್ರೀಡಾ ಸಂಸ್ಥೆಗಳಿಗೆ ₹ 25 ಲಕ್ಷ ನೆರವು
– ನರೇಗಾ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ₹ 5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ
– ₹ 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಒಲಿಂಪಿಕ್ ಕನಸಿನ ಯೋಜನಾ ನಿಧಿ ಸ್ಥಾಪನೆ
– ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ ₹ 9,698 ಕೋಟಿ ಅನುದಾನ
– ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿನಲ್ಲಿ ₹6,000 ಕೋಟಿ ಕಾಮಗಾರಿಗಳಿಗೆ ಒತ್ತು.
– ಹೈ ಡೆನ್ಸಿಟಿ ಕಾರಿಡಾರ್ ಯೋಜನೆ ಅಡಿಯಲ್ಲಿ ₹ 278 ಕೋಟಿ ವೆಚ್ಚದಲ್ಲಿ 108 ಕಿ.ಮೀ ರಸ್ತೆ ಅಭಿವೃದ್ಧಿ.
– ಮಳೆ ನೀರು ಸರಾಗವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು 195 ಕಿ.ಮೀ ಉದ್ದದ ಚರಂಡಿ ಹಾಗೂ ಕಲ್ವರ್ಟ್‌ಗಳ ನಿರ್ಮಾಣಕ್ಕೆ ₹ 1,813 ಕೋಟಿ ಅನುದಾನ
– ಆರ್ಟಿಫಿಷಿಯನ್ ಇಂಟೆಲಿಜೆನ್ಸ್ ಮೂಲಕ ಟ್ರಾಫಿಕ್ ನಿರ್ವಹಣೆಗೆ ಯೋಜನೆ. ಅದಕ್ಕಾಗಿ ₹ 150 ಕೋಟಿ ವೆಚ್ಚದಲ್ಲಿ 75 ಜಂಕ್ಷನ್ ಅಭಿವೃದ್ಧಿ
– ಟಿನ್ ಫ್ಯಾಕ್ಟರಿಯಿಂದ ಮೇಡನಹಳ್ಳಿ ವರೆಗೆ ₹ 350 ಕೋಟಿ ವೆಚ್ಚದಲ್ಲಿ 5 ಕಿ.ಮೀ ಎಲಿವೇಟೆಡ್ ರಸ್ತೆ ನಿರ್ಮಾಣ
– ₹ 1,000 ಕೋಟಿ ವೆಚ್ಚದಲ್ಲಿ 120 ಕಿ.ಮೀ ಆರ್ಟೀರಿಯಲ್ ರಸ್ತೆಯ ವೈಟ್ ಟಾಪಿಂಗ್. 300 ಕಿ.ಮೀ ಆರ್ಟೀರಿಯಲ್ ರಸ್ತೆ ಹಾಗೂ ಸಬ್ ಆರ್ಟೀರಿಯಲ್ ರಸ್ತೆ ಅಭಿವೃದ್ಧಿಗೆ ₹ 450 ಕೋಟಿ
– ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳ ಅಭಿವೃದ್ಧಿ, ಹಾಗೂ ಪುನರ್ ನಿರ್ಮಾಣಕ್ಕೆ ₹ 300 ಕೋಟಿ ಅನುದಾನ
– 40.15 ಕಿ.ಮೀ ಮೆಟ್ರೋ ರೈಲು ಮಾರ್ಗ ಕಾರ್ಯಗತಗೊಳಿಸಲು ಯೋಜನೆ
– ಹವಾಮಾನ ಬದಲಾವಣೆ ಪರಿಣಾಮ ಕಡಿಮೆ ಮಾಡಲು ಹಾಗೂ ಪ್ರವಾಹ ನಿಯಂತ್ರಣಗೊಳಿಸಲು ವಿಶ್ವಬ್ಯಾಂಕ್ ಸಹಯೋಗದಲ್ಲಿ ₹ 3 ಸಾವಿರ ಕೋಟಿ ಯೋಜನೆ
– ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಸಲುವಾಗಿ BWSSBಗೆ ₹ 200 ಕೋಟಿ ನೆರವು
– ರಾಜ್ಯದ 25 ಸ್ಥಳಗಳಲ್ಲಿ ಜವಳಿ ಪಾರ್ಕ್
– ನೇಕಾರ ಸಮ್ಮಾನ್ ಯೋಜನೆ ಅಡಿ ನೀಡುವ ಸಹಾಯಧನ ಮಾಸಿಕ ₹ 3 ಸಾವಿರದ ಬದಲು ₹ 5 ಸಾವಿರಕ್ಕೆ ಏರಿಕೆ. 1.5 ಲಕ್ಷ ನೇಕಾರರಿಗೆ ಯೋಜನೆಯ ಲಾಭ
– ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019–24 ಪರಿಷ್ಕರಣೆಯಿಂದ ₹ 4.2 ಸಾವಿರ ಕೋಟಿ ಹೂಡಿಕೆ. ಇದರಿಂದ 45 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ
ಉತ್ತರ ಕನ್ನಡದ ಕೋಡ್ಕಣಿ, ಬೆಳಗಾವಿಯ ಕಣಗಲ್, ಚಾಮರಾಜನಗರದ ಬದನಗುಪ್ಪೆ, ಕಲಬುರ್ಗಿಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿ–ಚಿಕ್ಕನಾಯಕನಹಳ್ಳಿ, ಬೀದರ್‌ನ ಹುಮನಾಬಾದ್, ರಾಯಚೂರು ಗ್ರಾಮಾಂತರ, ವಿಜಯಪುರದ ಹೂವಿನ ಹಿಪ್ಪರಗಿ, ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಹೊಸ ಕೈಗಾರಿಕ ವಸಾಹತು ಸ್ಥಾಪನೆ
– 2023ರ ಮಾರ್ಚ್ ಅಂತ್ಯದೊಳಗೆ ₹ 3,720 ಕೋಟಿ ವೆಚ್ಚದಲ್ಲಿ 948 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಹಾಗೂ 1,364 ಕಿ.ಮೀ ಉದ್ದದ ಜಿಲ್ಲೆ, ಇತರ ರಸ್ತೆಗಳ ಅಭಿವೃದ್ಧಿ
– ₹ 1.25 ಸಾವಿರ ಕೋಟಿ ವೆಚ್ಚದಲ್ಲಿ 3,084 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ ಯೋಜನೆ
– ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ₹ 100 ಕೋಟಿ ವಿಶೇಷ ಅನುದಾನ
– ವಿವಿಧ ಕಾರ್ಯಕ್ರಮಗಳಿಗಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ₹ 3 ಸಾವಿರ ಕೋಟಿ ಹೂಡಿಕೆ
– ಕೇಂದ್ರದ ಸಹಯೋಗದಲ್ಲಿ ₹ 7,394 ಕೋಟಿ ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲಾಂಟ್ ಯೋಜನೆ ಅನುಷ್ಠಾನ
– ರಾಜ್ಯದ ಇಂಧನ ಕಂಪನಿಗಳಿಗೆ ₹ 13,743 ಕೋಟಿ ಅನುದಾನ
– 2.35 ಲಕ್ಷ ವಿದ್ಯುತ್ ಸಂಪರ್ಕರಹಿತ ಮನೆಗಳಿಗೆ ₹ 124 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ
– 5 ಸಾವಿರ ವಸತಿರಹಿತ ಪೌರ ಕಾರ್ಮಿಕರಿಗಾಗಿ ₹ 3 ಸಾವಿರ ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ
– ರಾಜ್ಯದ 287 ನಗರಗಳಲ್ಲಿ ₹ 9,230 ಕೋಟಿ ವೆಚ್ಚದಲ್ಲಿ ನೀರು ಸರಬರಾಜು, ಜಲಮೂಲ ಸಂರಕ್ಷಣೆ ಕಾರ್ಯಕ್ರಮ
– ಒಳ ಚರಂಡಿ ಮಂಡಳಿಯಿಂದ 185 ನಗರಗಳಲ್ಲಿ ₹ 6,820 ಕೋಟಿ ವೆಚ್ಚದಲ್ಲಿ ಸುಮಾರು 7.21 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ
– ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರಿಗೆ 'ವಿದ್ಯಾವಾಹಿನಿ' ಯೋಜನೆ ಅಡಿಯಲ್ಲಿ ₹ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ
– 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ
– ತಾಯಿ ಹಾಗೂ ಶಿಶು ಮರಣ ದರ ಇಳಿಕೆ ಸಲುವಾಗಿ ರಾಜ್ಯದಲ್ಲಿ 10 ತಾಯಿ ಹಾಗೂ ಮಕ್ಕಳ ಆಸ್ಪತ್ರೆಗಳನ್ನು ₹ 165 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲು ಕ್ರಮ
– ತಾಯಿ ಮತ್ತು ಶಿಶುವನ್ನು ಸುರಕ್ಷಿತವಾಗಿ ತಾಲ್ಲೂಕು ಆಸ್ಪತ್ರೆಯಿಂದ ಮನೆಗೆ ತಲುಪಿಸಲು 12.5 ಕೋಟಿ ವೆಚ್ಚದಲ್ಲಿ ನಗು–ಮಗು ವಾಹನ ಒದಗಿಸಲು ಕ್ರಮ
– ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ತೃತೀಯ ಹಂತದ ಆರೈಕೆ ಒದಗಿಸಲು ಕೋಲಾರ, ಬಾಗಲಕೋಟೆ, ಯಾದಗಿರಿ, ಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಹಾಗೂ ದೊಡ್ಡಬಳ್ಳಾಪುರದಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ವಿಭಾಗ ಸ್ಥಾಪನೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ವಿಭಜಿಸಿ, ಮಕ್ಕಳ ಪೌಷ್ಟಿಕತೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಪ್ರತ್ಯೇಕ ಇಲಾಖೆಗಳನ್ನು ಸ್ಥಾಪಿಸಲು ಕ್ರಮ
– ಸಹಸ್ರ ಸರೋವರ ಯೋಜನೆ ಅಡಿಯಲ್ಲಿ 1 ಸಾವಿರ ಸಣ್ಣ ಸರೋವರಗಳ ಅಭಿವೃದ್ಧಿ.
– ಸಹ್ಯಾದ್ರಿ ಸಿರಿ ಯೋಜನೆ ಅಡಿಯಲ್ಲಿ ಕರಾವಳಿ, ಮಲೆನಾಡು ಹಾಗೂ ಇತರ ಮಲೆನಾಡು ಪ್ರದೇಶಗಳಲ್ಲಿ ನೀರತು ಸಂರಕ್ಷಣೆಗೆ ಕಾರ್ಯಕ್ರಮಗಳು
ಈ ಯೋಜನೆಗಳಿಗೆ ₹ 75 ಕೋಟಿ ಅನುದಾನ
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ ₹ 180 ಕೋಟಿ ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆ
ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಲಾಗಿದೆ. ಮೀನುಗಾರರು, ಟ್ಯಾಕ್ಸಿ–ಆಟೋ ಚಾಲಕರ ಮಕ್ಕಳಿಗೂ ಯೋಜನೆ ವಿಸ್ತಣೆ. ಇದಕ್ಕಾಗಿ ಸದ್ಯ ನೀಡಲಾಗುತ್ತಿರುವ ₹ 725 ಕೋಟಿ ಜೊತೆಗೆ ಹೆಚ್ಚುವರಿಯಾಗಿ ₹ 141 ಕೋಟಿ ಅನುದಾನ
2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ 'ಮಕ್ಕಳ ಬಸ್ಸು' ಯೋಜನೆಗಾಗಿ ₹ 100 ಕೋಟಿ ಅನುದಾನ
* ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ
* 8 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯ ಲಾಭ
– ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ₹ 18,000 ಕೋಟಿ ವೆಚ್ಚದಲ್ಲಿ 88 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ
– ಗ್ರಾಮೀಣ ಭಾಗದ ರಸ್ತೆಗಳ ಮತ್ತು ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ, ನರೇಗಾ ಜೊತೆಗೆ ಸಂಯೋಜಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ.ಮೀ. ನಂತೆ ಒಟ್ಟಾರೆಯಾಗಿ 5,000 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ₹ 300 ಕೋಟಿ ವೆಚ್ಚ ಮಾಡಲಾಗುವುದು.
– ರಾಜ್ಯದ 20 ಸಾವಿರ ಗ್ರಾಮಗಳಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕಾಮಗಾರಿಗಳು ಜಾರಿಯಲ್ಲಿವೆ. ಗ್ರಾಮೀಣ ಪ್ರದೇಶಗಳ ಸ್ವಚ್ಛತೆಯನ್ನು ಕಾಪಾಡಲು ಅಗತ್ಯ ಚರಂಡಿ ವ್ಯವಸ್ಥೆಯನ್ನು ನರೇಗಾ ಹಾಗೂ ಸ್ವಚ್ಛ ಭಾರತ್ ಯೋಜನೆಗಳಡಿಯಲ್ಲಿ ₹ 4,190 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
– ಪ್ರತಿ ವರ್ಷ 2,000 ಕೆರೆಗಳನ್ನು ₹ 200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಪಂಚಾಯತ್ ಕರೆಗಳ ಪುನರುಜ್ಜಿವನಕ್ಕೆ ಕ್ರಮ ವಹಿಸಲಾಗುವುದು.
– ಕಳೆದ ಮೂರು ವರ್ಷಗಳಲ್ಲಿ 5,213 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದ್ದು, ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ 2023ರ ಒಳಗಾಗಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುವುದು.
– ಗ್ರಂಥಾಲಯಗಳಿಲ್ಲದ 300 ಗ್ರಾಮಪಂಚಾಯಿತಿಗಳಲ್ಲಿ ಗ್ರಂಥಾಲಯ ಸ್ಥಾಪನೆ
ಕೃಷ್ಣ ಮೇಲ್ದಂಡೆ ಯೋಜನೆಯ ಹಂತ–3 ಭೂಸ್ವಾದೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. ₹ 5,000 ಕೋಟಿ ಅನುದಾನ ನೀಡಲಾಗುವುದು.
ಬಜೆಟ್ ಮಂಡನೆಗೂ ಮುನ್ನ ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಅವರು ವಿಶೇಷ ಪೂಜೆ ಸಲ್ಲಿಸಿ, ಕರ್ನಾಟಕದ ಸಮಸ್ತ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.