ADVERTISEMENT

Karnataka Budget Highlights | 3 ಲಕ್ಷ ಮನೆ ನಿರ್ಮಾಣದ ಗುರಿ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2024, 3:35 IST
Last Updated 16 ಫೆಬ್ರುವರಿ 2024, 3:35 IST
   

ರಾಜ್ಯದ ಅಭಿವೃದ್ಧಿಯ ಮುನ್ನೋಟ ನೀಡುವ 2024–25ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ.

ಇದು ಅವರು ಮಂಡಿಸಿದ 15ನೇ ಬಜೆಟ್ ಆಗಿದ್ದು, ಬಜೆಟ್‌ನ ಪ್ರಮುಖಾಂಶಗಳು ಇಲ್ಲಿವೆ...

ಬಜೆಟ್‌ ಮೊತ್ತ 3.71 ಲಕ್ಷ ಕೋಟಿ
2024–25ನೇ ಸಾಲಿನ ಬಜೆಟ್‌ ಮೊತ್ತ ₹ 3,71, 383 ಕೋಟಿಯಾಗಿದೆ. ರಾಜಸ್ವ ವೆಚ್ಚ ₹ 2,90,531, ಬಂಡವಾಳ ವೆಚ್ಚ ₹ 55,877 ಹಾಗೂ ಸಾಲ ಮರುಪಾವತಿ ₹ 24,974 ಕೋಟಿ
'ಗ್ಯಾರಂಟಿ ಯೋಜನೆಗಳನ್ನು ಜಗತ್ತೇ ಮೆಚ್ಚಿದೆ'
ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ₹ 50,000 ರಿಂದ ₹ 55,000 ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳ ಲಾಭ ರಾಜ್ಯದ ಜನರಿಗೆ ಲಭಿಸುತ್ತಿದೆ. ಈ ಯೋಜನೆಗಳನ್ನು ವಿರೋಧ ಪಕ್ಷಗಳು 'ಬಿಟ್ಟಿ ಭಾಗ್ಯಗಳು' ಎಂದು ಅಪಹಾಸ್ಯ ಮಾಡಿದ್ದವು. ಆದರೆ, ನಮ್ಮ ಕಲ್ಯಾಣ ಯೋಜನೆಗಳನ್ನು ಇಡೀ ಜಗತ್ತೇ ಮೆಚ್ಚಿದೆ.
ಅನ್ನಭಾಗ್ಯ ಯೋಜನೆ: 2024ರ ಜನವರಿ ವರೆಗೆ 4.02 ಕೋಟಿ ಫಲಾನುಭವಿಗಳಿಗೆ ₹ 4,595 ಕೋಟಿ ವರ್ಗಾವಣೆ
ಕೇಂದ್ರದಿಂದ ₹ 67,000 ಕೋಟಿ ಬಾಕಿ
ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣ ತೆರಿಗೆ ಪಾವತಿಯಾಗುತ್ತಿದೆ. ಆದರೂ, ರಾಜ್ಯದ ಪಾಲನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ. 15ನೇ ಹಣಕಾಸು ಆಯೋಗದಲ್ಲಿ ಕೇಂದ್ರವು ರಾಜ್ಯಕ್ಕೆ ನೀಡಬೇಕಿದ್ದ ₹ 67,000 ಕೋಟಿ ಬಾಕಿ ಉಳಿಸಿಕೊಂಡಿದೆ.
80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ಅನ್ನ–ಸುವಿಧಾ ಯೋಜನೆ ಜಾರಿ
₹ 2.32 ಲಕ್ಷ ಕೋಟಿ ಹೂಡಿಕೆ
2023ರ ಸೆಪ್ಟೆಂಬರ್‌ ವರೆಗೆ ಬಹುರಾಷ್ಟ್ರೀಯ ಕಂಪನಿಗಳಿಂದ ಕರ್ನಾಟಕದಲ್ಲಿ ₹ 2.32 ಲಕ್ಷ ಕೋಟಿ ಹೂಡಿಕೆಯಾಗಿದೆ.
₹ 27,000 ಕೋಟಿ ಬೆಳೆ ಸಾಲ
ಪ್ರಸಕ್ತ ಸಾಲಿನಲ್ಲಿ 36 ಲಕ್ಷಕ್ಕೂ ಹೆಚ್ಚು ರೈತರಿಗೆ ₹ 27,000 ಕೋಟಿ ಬೆಳ ಸಾಲ ನೀಡಲಾಗುವುದು. ಹಿಂದಿನ ಅವಧಿಯ ಬೆಳೆ ಸಾಲ ಮನ್ನಾ ಬಾಕಿ ₹ 132 ಕೋಟಿಯನ್ನು ಡಿ.ಸಿ.ಸಿ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಲಾಗುವುದು.
ಶಾಲಾ–ಕಾಲೇಜುಗಳ ದುರಸ್ತಿಗೆ ₹ 850 ಕೋಟಿ
ಶಾಲಾ ಕಾಲೇಜುಗಳು ದುರಸ್ತಿ, ನಿರ್ಮಾಣದಂತಹ ಕಾರ್ಯಗಳಿಗೆ ಪ್ರಸಕ್ತ ಸಾಲಿನಲ್ಲಿ ₹ 850 ಕೋಟಿ ಅನುದಾನ ನಿಗದಿಪಡಿಸಲಾಗಿದೆ. 2000 ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಲಾಗುವುದು. ರಾಜ್ಯದ ಪದವಿ ಪೂರ್ವ ಕಾಲೇಜುಗಳ 20,000 ವಿದ್ಯಾರ್ಥಿಗಳಿಗೆ ₹ 10 ಕೋಟಿ ವೆಚ್ಚದಲ್ಲಿ NEET / JEE/ CET ತರಬೇತಿ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇನು ವಿಶ್ವ ವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ₹ 500 ಅನುದಾನ
ಮಹಿಳೆ ಮತ್ತು ಮಕ್ಕಳ ಕಲ್ಯಾಣ
ಗೃಹಲಕ್ಷ್ಮೀ ಯೋಜನೆಗೆ ₹ 28,608 ಕೋಟಿ ನಿಗದಿ. ಅಂಗನವಾಡಿ ಕಾರ್ಯಕರ್ತೆಯರಿಗೆ ₹ 90 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಫೋನ್ ವಿತರಣೆ. ₹ 200 ಕೋಟಿ ವೆಚ್ಚದಲ್ಲಿ ಒಂದು ಸಾವಿರ ಅಂಗನವಾಡಿ ನಿರ್ಮಾಣ. ಮೈತ್ರಿ ಯೋಜನೆ ಫಲಾನುಭವಿಗಳ ಮಾಸಾಶನ ₹ 1,200ಕ್ಕೆ ಏರಿಕೆ. ದೇವದಾಸಿಯರ ಮಾಸಾಶನ ₹ 2,000ಕ್ಕೆ ಹೆಚ್ಚಳ
2024–25ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ
ಸಮಾಜ ಕಲ್ಯಾಣ
ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಸತಿ ಶಾಲೆಗಳು ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ₹ 2,710 ಕೋಟಿ ಅನುದಾನ. ಈ ವರ್ಗದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ ₹ 100ಕ್ಕೆ ಏರಿಕೆ.
ವಕ್ಫ್‌ ಆಸ್ತಿ ರಕ್ಷಣೆಗೆ ₹ 100 ಕೋಟಿ
ವಕ್ಫ್‌ ಆಸ್ತಿ ರಕ್ಷಣೆ ಮತ್ತು ಅಭಿವೃದ್ಧಿಗೆ ₹ 100 ಕೋಟಿ. ಪ್ರಮುಖ ಧಾರ್ಮಿಕ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ₹ 20 ಕೋಟಿ. ಮಂಗಳೂರಿನ ಹಜ್‌ ಭವನ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ. ಜೈನ ಧಾರ್ಮಿಕ ಕೇಂದ್ರ ಅಭಿವೃದ್ಧಿಗೆ ₹ 50 ಕೋಟಿ ಅನುದಾನ. ಕ್ರಿಶ್ಚಿಯನ್ನರ ಅಭಿವೃದ್ಧಿಗೆ ₹ 200 ಕೋಟಿ ಅನುದಾನ.
ಕಟ್ಟಡ ಕಾರ್ಮಿಕರಿಗೆ ತಾತ್ಕಾಲಿಕ ವಸತಿ: 10 ಜಿಲ್ಲೆಗಳಲ್ಲಿ ₹ 100 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ವಸತಿ ಸಮುಚ್ಚಯ
ಬಳ್ಳಾರಿಯ ಸಂಡೂರಿನಯಲ್ಲಿ ಸ್ಕಿಲ್ ಅಕಾಡೆಮಿ
ಪ್ರಗತಿಪಥ
ಪ್ರಗತಿಪಥ ಯೋಜನೆಯಡಿ ₹ 5,200 ಕೋಟಿ ವೆಚ್ಚದಲ್ಲಿ 189 ಗ್ರಾಮೀಣ ವಿಧಾನಸಭೆ ಕ್ಷೇತ್ರಗಳಲ್ಲಿ 9,450 ಕಿ.ಮೀ. ಉದ್ದದ ರಸ್ತೆ ಜಾಲ ಅಭವೃದ್ಧಿ
ನರೇಗಾ ಯೋಜನೆಯಡಿ 16 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ
ಕಲ್ಯಾಣಪಥ
ಕಲ್ಯಾಣಪಥ ಯೋಜನೆಯಡಿ ₹ 1,000 ಕೋಟಿ ವೆಚ್ಚದಲ್ಲಿ 38 ಗ್ರಾಮೀಣ ವಿಧಾನಸಭೆ ಕ್ಷೇತ್ರಗಳಲ್ಲಿ 1,150 ಕಿ.ಮೀ. ಉದ್ದದ ರಸ್ತೆ ಜಾಲ ಅಭವೃದ್ಧಿ
50 ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್‌ ದೀಪ ಅಳವಡಿಕೆ
ಜೀತ ಪದ್ದತಿಯಿಂದ ಬಿಡುಗಡೆಗೊಂಡವರಿಗೆ ಮಾಸಿಕ ಪ್ರೋತ್ಸಾಹಧನ ₹ 2,000ಕ್ಕೆ ಏರಿಕೆ
ಆರೋಗ್ಯ
ಏಳು ಜಿಲ್ಲೆಗಳಲ್ಲಿ ಕ್ರಿಟಿಕಲ್‌ ಕೇರ್‌ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ₹ 187 ಕೋಟಿ. ಏಳು ತಾಲ್ಲೂಕುಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣಕ್ಕೆ ₹ 280 ಕೋಟಿ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉನ್ನತೀಕರಣಕ್ಕೆ ₹ 150 ಕೋಟಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆಸ್ಪತ್ರೆ ಸ್ಥಾಪನೆಗೆ ₹ 221 ಕೋಟಿ. ₹ 20 ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿ ಡೇ–ಕೇರ್‌ ಕಿಮೋಥರಪಿ ಕೇಂದ್ರ ಸ್ಥಾಪನೆ.
ಇ.ಎಸ್‌.ಐ ಯೋಜನೆ: ₹ 311 ಕೋಟಿ ವೆಚ್ಚದಲ್ಲಿ ವಿವಿಧ ಸೇವೆ, ಸೌಲಭ್ಯ
ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗೆ ₹ 400 ಕೋಟಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ ₹ 130 ಕೋಟಿ ಅನುದಾನ

ಜಲಸಂಪನ್ಮೂಲ

ADVERTISEMENT
  • ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಯೋಜನಾ ವಿಭಾಗ

  • ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡನಗರದ ಬಳಿಯ ವಿತರಣಾ ತೊಟ್ಟಿಯವರೆಗೆ ಪೂರ್ವ ಪರೀಕ್ಷಾರ್ಥವಾಗಿ ನೀರು ಹರಿಸಿ ಚಾಲನೆಗೊಳಿಸಲಾಗಿದೆ.

  • ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅಡಿಯಲ್ಲಿ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ

  • ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್‌ನಲ್ಲಿ ₹ 5,300 ಕೋಟಿ ಅನುದಾನ ಘೋಷಿಸಿತ್ತು. ಆದರೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ.

  • ವಿವಿಧ ಜಿಲ್ಲೆಗಳಲ್ಲಿ ₹ 7,280 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ 97,698 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.