ADVERTISEMENT

ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು ಬಜೆಟ್‌ ವೀಕ್ಷಿಸಿದ ನಿರ್ಮಲಾ ಪುತ್ರಿ ವಾಙ್ಮಯಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 11:01 IST
Last Updated 1 ಫೆಬ್ರುವರಿ 2023, 11:01 IST
ನಾರಾಯಣ್ ಸೀತಾರಾಮನ್ ಅವರ ಜೊತೆ ವಾಂಗ್ಮಾಯಿ
ನಾರಾಯಣ್ ಸೀತಾರಾಮನ್ ಅವರ ಜೊತೆ ವಾಂಗ್ಮಾಯಿ   

* ಸಂಸತ್‌ನಲ್ಲಿ ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ ವೇಳೆ ಅವರ ಪುತ್ರಿ ವಾಙ್ಮಯಿ ಪರಕಾಲ ಮತ್ತು ಸಂಬಂಧಿಕರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು, ವೀಕ್ಷಿಸಿದರು

* ನರೇಂದ್ರ ಮೋದಿ ಅವರ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ವೀಕ್ಷಿಸಲು ಸಂದರ್ಶಕರ ಗ್ಯಾಲರಿ ಭರ್ತಿಯಾಗಿತ್ತು

* ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯಸಭೆಯ ಹಲವು ಸದಸ್ಯರು ಸಹ ಹಾಜರಿದ್ದು, ಬಜೆಟ್‌ನಲ್ಲಿ ಘೋಷಿಸಿದ ಹಲವು ಪ್ರಸ್ತಾವಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡರು

ADVERTISEMENT

* ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ದೇಶವು ಆರೋಗ್ಯಕರ ಆರ್ಥಿಕ ಬೆಳವಣಿಗೆ ದಾಖಲಿಸುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿರುವ ಭಾರತವನ್ನು ಆರ್ಥಿಕ ಪ್ರಗತಿಯಲ್ಲಿ ‘ಪ್ರಕಾಶಮಾನ ನಕ್ಷತ್ರ’ವೆಂದು ಜಗತ್ತು ಗುರುತಿಸಿದೆ. ದೇಶದ ಸಾಧನೆಗಳನ್ನು ವಿಶ್ವ ಪ್ರಶಂಸಿಸುತ್ತಿದೆ– ಬಜೆಟ್‌ ಭಾಷಣದಲ್ಲಿ ಸಚಿವೆ ನಿರ್ಮಲಾ ಪ್ರತಿಪಾದನೆ

* ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯು ಶೇ 7 ಇದೆ. ಪ್ರಮುಖ ಆರ್ಥಿಕತೆಗಳಲ್ಲಿ ಈ ಬೆಳವಣಿಗೆ ಅತಿ ಹೆಚ್ಚು ಎನಿಸಿದೆ. ದೇಶದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ – ನಿರ್ಮಲಾ ಬಣ್ಣನೆ

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.