ADVERTISEMENT

Union Budget 2023: ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಸಿಕ್ಕಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2023, 9:44 IST
Last Updated 1 ಫೆಬ್ರುವರಿ 2023, 9:44 IST
   

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೂ ಆರ್ಥಿಕವಾಗಿ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಸ್ಮರಣಾರ್ಥವಾಗಿ ಮಹಿಳೆಯರಿಗಾಗಿ ‘ಮಹಿಳಾ ಸಮ್ಮಾನ್ ಬಚತ್ ಪತ್ರ’ ಎಂಬ ಒಂದು ಬಾರಿ ಸಣ್ಣ ಉಳಿತಾಯ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯು ಎರಡು ವರ್ಷಗಳ ಕಾಲ, 2025ರವರೆಗೆ ಜಾರಿಯಲ್ಲಿರಲಿದೆ.

ಈ ಯೋಜನೆಯಡಿ ಮಹಿಳೆ ಅಥವಾ ಬಾಲಕಿ ಹೆಸರಲ್ಲಿ ₹ 2 ಲಕ್ಷ ರೂಪಾಯಿವರೆಗೆ ಠೇವಣಿ ಇಡುವ ಅವಕಾಶವಿದ್ದು, ಶೇಕಡ 7.5ರಷ್ಟು ಬಡ್ಡಿ ಸಿಗಲಿದೆ. ಭಾಗಶಃ ವಿತ್‌ಡ್ರಾ ಸೌಲಭ್ಯ ಸಹ ಇರಲಿದೆ.

ADVERTISEMENT

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮಿತಿಯನ್ನು ₹15 ಲಕ್ಷದಿಂದ ₹30ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಇವನ್ನೂ ಓದಿ...

ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ₹4.5 ಲಕ್ಷದಿಂದ ₹9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆಯ ಮಿತಿ ₹9 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.