ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಏಪ್ರಿಲ್ ಮೊದಲ ವಾರದವರೆಗೆ ಅಧಿವೇಶನ ನಡೆಯಲಿದೆ. ಈ ಅಧಿವೇಶನದ ಬಗ್ಗೆ ತಿಳಿಯಬೇಕಾದ ಕೆಲ ಅಂಶಗಳು ಇಲ್ಲಿವೆ.
1. ಕೋವಿಡ್ ಸೋಂಕಿನಿಂದಾಗಿ ಅರ್ಧಕ್ಕೆ ನಿಂತ ಮುಂಗಾರು ಅಧಿವೇಶನದ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನವಾಗಿದೆ. ಬಳಿಗಾಲದ ಅಧಿವೇಶನ ನಡೆದಿರಲಿಲ್ಲ.
2. ಮುಂಗಾರು ಅಧಿವೇಶನದಂತಲ್ಲದೆ ಈ ಬಾರಿ ವಾರಂತ್ಯದಲ್ಲಿ ಸಂಸತ್ತಿನ ಅಧಿವೇಶನ ಇರುವುದಿಲ್ಲ.
3. ಮುಂಗಾರು ಅಧಿವೇಶನದಲ್ಲಿ ತೆಗೆದು ಹಾಕಲಾಗಿದ್ದ ಪ್ರಶ್ನಾವಳಿ ಅವಧಿಯನ್ನು ಮತ್ತೆ ಆರಂಭಿಸಲಾಗುತ್ತಿದೆ.
4. ಸುಮಾರು ಐದು ತಿಂಗಳ ಅನಿರ್ದಿಷ್ಟಾವಧಿ ಮುಂದೂಡಿಕೆಯ ನಂತರ ಪ್ರಾರಂಭವಾದ ಮಾನ್ಸೂನ್ ಅಧಿವೇಶನವು ಸೆಪ್ಟೆಂಬರ್‌ನಲ್ಲಿ ಸಮಯಕ್ಕಿಂತ ಎಂಟು ದಿನಗಳ ಮುಂಚಿತವಾಗಿ ಮುಕ್ತಾಯಗೊಂಡಿತ್ತು
5. ಕೋವಿಡ್ ಪ್ರೋಟೊಕಾಲ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮುದ್ರಿತ ಪ್ರತಿಗಳಿಲ್ಲದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
6. ಎರಡೂ ಸದನಗಳ 750 ಸದಸ್ಯರಿಗೆ ಬಜೆಟ್ ಮತ್ತು ಆರ್ಥಿಕ ಸಮೀಕ್ಷೆಯ ಸಾಫ್ಟ್ ಕಾಪಿ ನೀಡಲಾಗುತ್ತದೆ.
7. ಉಪ ರಾಷ್ಟ್ರಪತಿ ಮತ್ತು ರಾಜ್ಸಸಭಾ ಸ್ಪೀಕರ್ ವೆಂಕಯ್ಯ ನಾಯ್ಡು, ಸದಸ್ಯರು ಮತ್ತು ನೌಕರರು ಸೇರಿ 1,200 ಮಂದಿಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ಯಾರಿಗೂಕೋವಿಡ್ ಪಾಸಿಟಿವ್ ಬಂದಿಲ್ಲ.
8. ವಿವಾದಿತ ಕೃಷಿ ಕಾಯ್ದೆಗಳಿಗೆ ವಿರೋಧವ್ಯಕ್ತಪಡಿಸಿ,ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ 17 ವಿಪಕ್ಷಗಳು ರಾಷ್ಟ್ರಪತಿಯ ಭಾಷಣವನ್ನು ಬಹಿಷ್ಕರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.