ADVERTISEMENT

ಬಡವರು,ಮಹಿಳೆಯರು,ಯುವಜನತೆ,ರೈತರು - ನಮ್ಮ ಸರ್ಕಾರದ ನಾಲ್ಕು ಜಾತಿಗಳು: ನಿರ್ಮಲಾ

ಪಿಟಿಐ
Published 1 ಫೆಬ್ರುವರಿ 2024, 6:23 IST
Last Updated 1 ಫೆಬ್ರುವರಿ 2024, 6:23 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

(ಪಿಟಿಐ ಚಿತ್ರ)

ನವದೆಹಲಿ: ಬಡವರು, ಮಹಿಳೆಯರು, ಯುವಜನತೆ ಹಾಗೂ ರೈತರು ನಮ್ಮ ಸರ್ಕಾರದ ನಾಲ್ಕು ಜಾತಿಗಳು ಎಂದು 2024–25ನೇ ಹಣಕಾಸು ವರ್ಷದ ಕೇಂದ್ರದ ಮಧ್ಯಂತರ ಬಜೆಟ್‌ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ADVERTISEMENT

ನಮ್ಮ ಸರ್ಕಾರದ ಪಾಲಿಗೆ ಸಾಮಾಜಿಕ ನ್ಯಾಯವು ಪರಿಣಾಮಕಾರಿ ಮತ್ತು ಅಗತ್ಯ ಮಾದರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಸುಸ್ಥಿರ ಅಭಿವೃದ್ಧಿ ಮತ್ತು ಉತ್ಪಾದಕತೆ ಹೆಚ್ಚಿಸಲು ಅಗತ್ಯ ಆರ್ಥಿಕ ನೀತಿಯನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 11.8 ಕೋಟಿ ಜನರಿಗೆ ಪ್ರಯೋಜನ ದೊರಕಿದೆ ಎಂದು ಹಣಕಾಸು ಸಚಿವೆ ಪ್ರತಿಪಾದಿಸಿದ್ದಾರೆ.

ದೇಶದ ಆರ್ಥಿಕತೆ ಕಳೆದ 10 ವರ್ಷಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಂಡಿದೆ. 'ಸ್ಕಿಲ್ ಇಂಡಿಯಾ' ಯೋಜನೆ ಅಡಿಯಲ್ಲಿ 1.4 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.