ADVERTISEMENT

Budget 2024 | ಸೋಲಾರ್‌ ಯೋಜನೆ: 300 ಯೂನಿಟ್‌ಗಳಷ್ಟು ಉಚಿತ ವಿದ್ಯುತ್

ಪಿಟಿಐ
Published 1 ಫೆಬ್ರುವರಿ 2024, 15:58 IST
Last Updated 1 ಫೆಬ್ರುವರಿ 2024, 15:58 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

ನವದೆಹಲಿ: ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಿಂದಾಗಿ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ಗರಿಷ್ಠ 300 ಯೂನಿಟ್‌ಗಳಷ್ಟು ಉಚಿತ ವಿದ್ಯುತ್ ಪಡೆಯಲಿವೆ. ಇದರಿಂದ ವಾರ್ಷಿಕ ₹18 ಸಾವಿರ ಉಳಿತಾಯವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ತಿಳಿಸಿದರು.

ಯೋಜನೆಯ ಅನುಕೂಲಗಳ ಬಗ್ಗೆ ತಿಳಿಸಿದ ಅವರು, ‘ಉಚಿತ ಸೋಲಾರ್‌ ವಿದ್ಯುತ್‌ನಿಂದ ಕುಟುಂಬಗಳು ವಾರ್ಷಿಕ ₹15,000ರಿಂದ ₹18,000 ಉಳಿತಾಯ ಮಾಡಬಹುದು. ಹೆಚ್ಚುವರಿ ವಿದ್ಯುತ್‌ ಅನ್ನು ವಿತರಣಾ ಕಂಪನಿಗಳಿಗೆ ಮಾರಾಟ ಮಾಡಬಹುದು’ ಎಂದು ತಿಳಿಸಿದರು.

ADVERTISEMENT

ದೇಶದಾದ್ಯಂತ ಒಂದು ಕೋಟಿ ಮನೆಗಳ ಮೇಲೆ ಸೌರವಿದ್ಯುತ್‌ ಘಟಕ ಅಳವಡಿಸುವ ಉದ್ದೇಶದಿಂದ ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಯನ್ನು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.