ADVERTISEMENT

ಬಜೆಟ್‌ 2020 | ಕೌಶಲಾಭಿವೃದ್ಧಿ ಯೋಜನೆಗೆ ₹3,000 ಕೋಟಿ

ಪಿಟಿಐ
Published 1 ಫೆಬ್ರುವರಿ 2020, 19:45 IST
Last Updated 1 ಫೆಬ್ರುವರಿ 2020, 19:45 IST

ನವದೆಹಲಿ: ಕೌಶಲಾಭಿವೃದ್ಧಿ ಯೋಜನೆಗಳ ಉತ್ತೇಜನಕ್ಕೆ ₹3,000 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ.

ಶಿಕ್ಷಕರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದುಡಿವವರ ಕೌಶಲ ಅಭಿವೃದ್ಧಿಗಾಗಿ ಆರೋಗ್ಯ ಸಚಿವಾಲಯ ಮತ್ತು ಕೌಶಲ ಅಭಿವೃದ್ಧಿ ಸಚಿವಾಲಯಗಳು ವೃತ್ತಿಪರ ಸಂಸ್ಥೆಗಳ ಸಹಾಯ ಪಡೆದು ವಿಶೇಷ ಬ್ರಿಜ್‌ ಕೋರ್ಸ್‌ ರೂಪಿಸಲಿವೆ ಎಂದು ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಕೌಶಲ ಅಭಿವೃದ್ಧಿಗಾಗಿ ವಿಶೇಷ ಕೋರ್ಸ್‌ಗಳನ್ನು ನಡೆಸುವ ಯೋಜನೆ ಇದೆ. ವಿದೇಶಗಳಲ್ಲಿ ಉದ್ಯೋಗ ಪಡೆಯುವ ಆಸಕ್ತಿ ಹೊಂದಿದವರಿಗೂ ಕೌಶಲ ಅಭಿವೃದ್ಧಿಗೆ ವಿಶೇಷ ತರಬೇತಿ ನೀಡಲಾಗುವುದು.ವಿಜ್ಞಾನ– ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಂತೆ ಇತರ ವಿಭಾಗಗಳ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗಾಗಿ ದೇಶದ 150 ಉನ್ನತ ಶಿಕ್ಷಣ ಸಂಸ್ಥೆಗಳು 2021ರ ಮಾರ್ಚ್‌ ವೇಳೆಗೆ ಅಪ್ರೆಂಟಿಷಿಪ್‌ ಆಧರಿತ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಿವೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.