ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಈ ಡಿಜಿಟಲ್ ವಿಶ್ವವಿದ್ಯಾನಿಲಯವು ದೇಶಾದ್ಯಂತದ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸುತ್ತದೆ ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
‘ದೇಶದಾದ್ಯಂತದ ವಿದ್ಯಾರ್ಥಿಗಳಿಗೆ ಅವರ ಮನೆ ಬಾಗಿಲಿಗೆ ವೈಯಕ್ತಿಕ ಕಲಿಕೆಯ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣದ ಪ್ರವೇಶವನ್ನು ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು’ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಏನಿದು ಡಿಜಿಟಲ್ ಯೂನಿವರ್ಸಿಟಿ..?
ಕೇಂದ್ರವು ಸ್ಥಾಪಿಸಲು ಯೋಜಿಸಿರುವ ಡಿಜಿಟಲ್ ವಿಶ್ವವಿದ್ಯಾಲಯವು ನೆಟ್‌ವರ್ಕ್ ‘ಹಬ್’ಮತ್ತು ‘ಸ್ಪೋಕ್’ಮಾದರಿಯನ್ನು ಆಧರಿಸಿದೆ. ಹಬ್ ಮತ್ತು ಸ್ಪೋಕ್ ಮಾದರಿಯು ನಾಲೆಡ್ಜ್ ವಿತರಣಾ ವಿಧಾನವನ್ನು ಉಲ್ಲೇಖಿಸುತ್ತದೆ, ಇದರಲ್ಲಿ ನಾಲೆಲ್ಡ್ ಕೇಂದ್ರೀಕೃತ 'ಹಬ್' ನಲ್ಲಿ ಹುಟ್ಟುತ್ತದೆ ಮತ್ತು ನಂತರ ಬಳಕೆಗಾಗಿ ಸಣ್ಣ ಸ್ಥಳಗಳ ಮೂಲಕ 'ಸ್ಪೋಕ್ಸ್' ಗೆ ಹೋಗುತ್ತದೆ.
ಇಲ್ಲಿ ‘ಹಬ್’ಎಂದರೆ ದೇಶದ ಅತ್ಯುತ್ತಮ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳನ್ನು ಸೂಚಿಸುತ್ತದೆ. ‘ಸ್ಪೋಕ್’ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಯಾಗಿದ್ದು, ಅವರು ಡಿಜಿಟಲ್ ಮಾಧ್ಯಮದ ಮೂಲಕ ಮನೆಯಲ್ಲಿ ಹಬ್‌ಗಳಿಂದ ಉತ್ಪತ್ತಿಯಾಗುವ ಜ್ಞಾನವನ್ನು ಪಡೆದುಕೊಳ್ಳುತ್ತಾರೆ.
ಪ್ರತಿಯೊಂದು ಹಬ್‌ನಲ್ಲಿ ‘ಅತ್ಯಾಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವ್ಯವಸ್ಥೆ’ಯನ್ನು ನಿರ್ಮಿಸುವ ನಿರೀಕ್ಷೆಯಿದೆ.
ನಿರ್ಮಲಾ ಸೀತಾರಾಮನ್ ಅವರ ಭಾಷಣದಂತೆ, ಹಬ್‌ಗಳಿಂದ ಉತ್ಪತ್ತಿಯಾಗುವ ನಾಲೆಡ್ಜ್ ಅನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.
ಡಿಜಿಟಲ್ ವಿಶ್ವವಿದ್ಯಾಲಯವನ್ನು ಐಎಸ್‌ಟಿಇ ಮಾನದಂಡಗಳ ಪ್ರಕಾರ ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಐಎಸ್‌ಟಿಇ ಮಾನದಂಡಗಳು ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಗೆ ಮಾನದಂಡಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.