ADVERTISEMENT

Union Budget 2022: ಮುಖ್ಯಾಂಶಗಳ ಮಾಹಿತಿ ಇಲ್ಲಿದೆ ನೋಡಿ...

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 9:18 IST
Last Updated 1 ಫೆಬ್ರುವರಿ 2022, 9:18 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌    

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿದಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ.

***

ವಂದೇ ಭಾರತ್‌ ರೈಲು: ಮುಂದಿನ 3 ವರ್ಷಗಳಲ್ಲಿ ದೇಶದಾದ್ಯಂತ400 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ನಡೆಸಲಿವೆ.

ADVERTISEMENT

ನದಿ ಜೋಡಣೆ ಯೋಜನೆ:ಕಾವೇರಿ–ಪೆನ್ನಾರ್‌, ಪೆನ್ನಾರ್‌–ಕೃಷ್ಣಾ, ಗೋದಾವರಿ–ಕೃಷ್ಣ ಸೇರಿದಂತೆ ನದಿ ಜೋಡಣೆಯ ಐದು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಮ್ಮತಿಸೂಚಿಸಿದೆ.

5ಜಿ ತರಂಗಾಂತರ ಹರಾಜು:5ಜಿ ಸಂಪರ್ಕ ಸೇವೆಗಳಿಗಾಗಿ ಇದೇ ವರ್ಷ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಯಲಿದೆ.

‘ಟೆಲಿ ಮೆಂಟಲ್‌ ಹೆಲ್ತ್’ ಕಾರ್ಯಕ್ರಮ:ಕೋವಿಡ್‌ನಿಂದ ಉಂಟಾದ ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ‘ನ್ಯಾಷನಲ್‌ ಟೆಲಿ ಮೆಂಟಲ್‌ ಹೆಲ್ತ್’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

ಮಿಲಿಟರಿ ಉಪಕರಣ ಉದ್ಯಮ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉದ್ಯಮ, ಸ್ಟಾರ್ಟ್‌ಅಪ್‌ಗಳು ಮತ್ತು ಅಕಾಡೆಮಿಗಳಿಗೆ ತೆರೆಯಲಾಗುವುದು

ಡಿಜಿಟಲ್ ಬ್ಯಾಂಕಿಂಗ್ ಘಟಕ:ದೇಶಾದಾದ್ಯಂತ75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಕಸ್ಟಮ್ಸ್ ಸುಂಕ ಇಳಿಕೆ:ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 5% ಕ್ಕೆ ಇಳಿಸಲಾಗುವುದು.

ಸರ್ಕಾರಿ ನೌಕರರ ತೆರಿಗೆ ಮಿತಿ:ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ 10ರಿಂದ ಶೇ 14ಕ್ಕೆ ಹೆಚ್ಚಿಸಲಾಗಿವುದು.

ಆರ್‌ಬಿಐನಿಂದ ಡಿಜಿಟಲ್ ರೂಪಾಯಿ:ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿ ಆರ್‌ಬಿಐ ಮೂಲಕಡಿಜಿಟಲ್ ರೂಪಾಯಿಯನ್ನು ನೀಡಲಾಗುವುದು.

ಒನ್ ಕ್ಲಾಸ್ ಒನ್ಟಿವಿ:ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲು ‘ಒನ್ ಕ್ಲಾಸ್ ಒನ್ ಟಿವಿ’ ಆರಂಭಿಸಲಾಗುವುದು.

ಸಹಕಾರ ಸಂಘಗಳ ತೆರಿಗೆ ದರ ಇಳಿಕೆ:ಸಹಕಾರ ಸಂಘಗಳ ಮೇಲಿನತೆರಿಗೆ ದರವನ್ನು ಶೇ.15ಕ್ಕೆ ಇಳಿಕೆ ಮಾಡಲಾಗುವುದು.

ಕೋರ್ ಬ್ಯಾಂಕಿಂಗ್ ಸೇವೆ: ದೇಶದಾದ್ಯಂತಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆ ಆರಂಭಿಸಲಾಗುವುದು.

ಕ್ರಿಪ್ಟೊಕರೆನ್ಸಿತೆರಿಗೆ:ವರ್ಚುವಲ್‌ ಡಿಜಿಟಲ್‌ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆಯನ್ನು ವಿಧಿಸಲಾಗುವುದು.

ಆದಾಯ ತೆರಿಗೆ ಮಿತಿ:ಆದಾಯ ತೆರಿಗೆ ಮಿತಿಯಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಇ ಪಾರ್ಸ್‌ಪೋರ್ಟ್:ಚಿಪ್ ಸಹಿತ ಇ ಪಾಸ್‌ಪೋರ್ಟ್‌ಗಳನ್ನು 2022–23ನೇ ಹಣಕಾಸು ವರ್ಷದಿಂದಜಾರಿಗೆ ತರಲಾಗುವುದು

ಕೃಷಿಗೆ ಆರ್ಥಿಕ ನೆರವು:ಅರಣ್ಯದಲ್ಲಿಕೃಷಿ ಮಾಡುವ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಆರ್ಥಿಕ ನೆರವು ನೀಡಲಾಗುವುದು

ಮನೆ ನಿರ್ಮಾಣ: ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿಒಂದುವರ್ಷಕ್ಕೆ80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು.

ಕಿಸಾನ್ ಡ್ರೋನ್:ಕೃಷಿಯಲ್ಲಿ 'ಕಿಸಾನ್ ಡ್ರೋನ್'ಗಳ ಬಳಕೆಯನ್ನು ಸರ್ಕಾರ ಉತ್ತೇಜಿಸಲಿದೆ.

ಬಜೆಟ್ ಕುರಿತ ಸಮಗ್ರ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ:ಬಜೆಟ್ 2022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.