ADVERTISEMENT

ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನೀಲಿ ನಕ್ಷೆಯಾಗಲಿದೆ ಬಜೆಟ್: ನಿರ್ಮಲಾ ಸೀತಾರಾಮನ್

ಪಿಟಿಐ
Published 1 ಫೆಬ್ರುವರಿ 2023, 7:02 IST
Last Updated 1 ಫೆಬ್ರುವರಿ 2023, 7:02 IST
   

ನವದೆಹಲಿ: ಕೇಂದ್ರ ಸರ್ಕಾರದ 2023ರ ಬಜೆಟ್‌, ಹಿಂದಿನ ಬಜೆಟ್‌ನ ಅಡಿಪಾಯದ ಮೇಲೆ ಮುನ್ನಡೆಯುವ ನಿರೀಕ್ಷೆ ಹೊಂದಿದ್ದು, ಭಾರತದ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನೀಲಿ ನಕ್ಷೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಇಂದು (ಫೆಬ್ರವರಿ 1) ಸಂಸತ್‌ನಲ್ಲಿ ಕೇಂದ್ರ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಅವರು 2019ರ ಜೂನ್‌ನಲ್ಲಿ ವಿತ್ತ ಸಚಿವೆಯಾದ ನಂತರ ಮಂಡಿಸುತ್ತಿರುವ ಸತತ ಐದನೇ ಬಜೆಟ್‌ ಇದಾಗಿದೆ.

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಮಂಡನೆಯಾಗುತ್ತಿರುವ 11ನೇ ಬಜೆಟ್‌ ಇದಾಗಿದೆ. ಹಾಗೆಯೇ ಇದು ಈ ಅವಧಿಯ ಕೇಂದ್ರ ಸರ್ಕಾರದ ಕೊನೆಯ ಪೂರ್ಣವಾಧಿ ಬಜೆಟ್‌ ಸಹ ಹೌದು.

ADVERTISEMENT

ಇದನ್ನು ಅಮೃತ (75ನೇ ಸ್ವಾತಂತ್ರ್ಯೋತ್ಸವದಿಂದ 100ನೇ ವರ್ಷದ ವರೆಗಿನ) ಕಾಲದ ಮೊದಲ ಬಜೆಟ್‌ ಎಂದು ಸಚಿವೆ ಕರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.