ADVERTISEMENT

Union Budget 2023: ಧೂಮಪಾನಿಗಳ ಜೇಬಿಗೆ ಬಿಸಿ ಮುಟ್ಟಿಸಿದ ‘ಅಮೃತಕಾಲದ ಬಜೆಟ್’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2023, 10:25 IST
Last Updated 1 ಫೆಬ್ರುವರಿ 2023, 10:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‌2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬುಧವಾರ ಮಂಡಿಸಿದ್ದಾರೆ.

ಸಿಗರೇಟ್ ಮೇಲಿನ ತೆರಿಗೆಯನ್ನು ಶೇಕಡ 16ಕ್ಕೆ ಹೆಚ್ಚಳ ಮಾಡಿರುವುದಾಗಿ ನಿರ್ಮಲಾ ಘೋಷಿಸಿದರು.

ಕೇಂದ್ರ ಬಜೆಟ್‌ನಲ್ಲಿ ಸಿಗರೇಟ್ ಮೇಲಿನ ತೆರಿಗೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾ ಮತ್ತು ಐಟಿಸಿ ಲಿಮಿಟೆಡ್ ಸೇರಿದಂತೆ ಸಿಗರೇಟ್ ಕಂಪನಿಗಳ ಷೇರುಗಳು ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ (ಬಿಎಸ್‌ಇ) ಶೇಕಡ 5 ರಷ್ಟು ಕುಸಿತ ಕಂಡಿವೆ.

ADVERTISEMENT

ಗಾಡ್‌ಫ್ರೇ ಫಿಲಿಪ್ಸ್ ಷೇರುಗಳು ಬಿಎಸ್‌ಇಯಲ್ಲಿ ಶೇಕಡ 4.92 ರಷ್ಟು ಕುಸಿದು ₹1,828.75ಕ್ಕೆ ತಲುಪಿದರೆ, ಗೋಲ್ಡನ್ ಟೊಬ್ಯಾಕೋ ಶೇಕಡ 3.81ರಷ್ಟು ಕುಸಿದು ₹59.4ಕ್ಕೆ ತಲುಪಿದೆ. ಷೇರುಪೇಟೆಯಲ್ಲಿ ಐಟಿಸಿ ಷೇರುಗಳು ಶೇಕಡ 0.78ರಷ್ಟು ಕಡಿಮೆಯಾಗಿ ₹349ಕ್ಕೆ ವಹಿವಾಟು ನಡೆಸುತ್ತಿವೆ. ಅಂತೆಯೇ ಎನ್‌ಟಿಸಿ ಇಂಡಸ್ಟ್ರೀಸ್ ಶೇಕಡ 1.4 ಮತ್ತು ವಿಎಸ್‌ಟಿ ಇಂಡಸ್ಟ್ರೀಸ್ ಶೇಕಡ 0.35 ರಷ್ಟು ಕುಸಿದಿದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.