ADVERTISEMENT

‘ಪೊಲ್ಯುಟಿಂಗ್’ ಪದದ ಬದಲು ‘ಪೊಲಿಟಿಕಲ್’ ಎಂದ ನಿರ್ಮಲಾ: ನಗೆಗಡಲಲ್ಲಿ ತೇಲಿದ ಸಂಸತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2023, 10:36 IST
Last Updated 1 ಫೆಬ್ರುವರಿ 2023, 10:36 IST
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದರು –ಐಎಎನ್‌ಎಸ್‌ ಚಿತ್ರ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದರು –ಐಎಎನ್‌ಎಸ್‌ ಚಿತ್ರ   

ನವದೆಹಲಿ: ‌2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬುಧವಾರ ಮಂಡಿಸಿದ್ದಾರೆ.

ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಕ್ರಮದ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಅವರು ಹೆಚ್ಚಿನ ಮಾಲಿನ್ಯ ಉಂಟು ಮಾಡುವ ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುವ ಹಳೇ ವಾಹನಗಳು ಮತ್ತು ಆಂಬುಲೆನ್ಸ್​ಗಳ ಬದಲಾವಣೆಗೆ ಕೇಂದ್ರ ಸರ್ಕಾರ ನೆರವು ಒದಗಿಸಲಿದೆ ಎಂದು ತಿಳಿಸಿದರು.

ADVERTISEMENT

ಇದೇ ವೇಳೆ ಸಚಿವರು ಮಾಲಿನ್ಯ (ಪೊಲ್ಯುಟಿಂಗ್) ಎಂದು ಹೇಳುವ ಬದಲು ರಾಜಕೀಯ (ಪೊಲಿಟಿಕಲ್) ಎಂದು ಹೇಳಿದರು. ಕೂಡಲೇ ಎಚ್ಚೆತ್ತ ಅವರು ಓಹ್ ಕ್ಷಮಿಸಿ ಎಂದು ಮುಗುಳ್ನಕ್ಕರು. ನಿರ್ಮಲಾ ಮಾತಿಗೆ ಇಡೀ ಸಂಸತ್ ಒಂದು ಕ್ಷಣ ನಗೆಗಡಲಲ್ಲಿ ತೇಲಿತು.

‘ಹಳೇ ಮಾಲಿನ್ಯಕಾರಕಗಳನ್ನು ಬದಲಿಸಬೇಕು, ನಾನು ಹೇಳಿದ್ದು ಸರಿ ಅಲ್ಲವೇ’ ಎಂದು ನಿರ್ಮಲಾ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.