ADVERTISEMENT

Budget 2024-25: ಹೊಸ ತೆರಿಗೆ ಪದ್ಧತಿಯಲ್ಲಿ ₹17,500 ಉಳಿತಾಯ– ಸಚಿವೆ ನಿರ್ಮಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2024, 7:24 IST
Last Updated 23 ಜುಲೈ 2024, 7:24 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಚೊಚ್ಚಲ ಬಜೆಟ್‌ನಲ್ಲಿ ತೆರಿಗೆದಾರರಿಗೆ ಸಿಹಿ ಸುದ್ದಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಹೊಸ ತೆರಿಗೆ ಪದ್ಧತಿಯಲ್ಲಿ ₹ 3ಲಕ್ಷ ಆದಾಯವರೆಗೆ ಶೂನ್ಯ ತೆರಿಗೆಯನ್ನು ಘೋಷಿಸಿದ್ದಾರೆ. ಹಳೇ ತೆರಿಗೆ ಪದ್ಧತಿಯಲ್ಲಿ ಶೇ 5ರಷ್ಟು ತೆರಿಗೆಯ ಮಿತಿಯು ₹2.5ಲಕ್ಷದಿಂದ ₹3ಲಕ್ಷವರೆಗಿನ ಆದಾಯಕ್ಕೆ ಇದ್ದು, ಅದು ಹಾಗೇ ಮುಂದುವರಿದಿದೆ.

ಹೊಸ ತೆರಿಗೆ ಪದ್ಧತಿಯಲ್ಲಿ ವೇತನದಾರರಿಗೆ ಸ್ಟಾಂಡರ್ಡ್‌ ಡಿಡಕ್ಷನ್ ₹50 ಸಾವಿರದಿಂದ ₹75 ಸಾವಿರವರೆಗೆ ಹಾಗೂ ಪಿಂಚಣಿದಾರರಿಗೆ ₹15ರಿಂದ ₹20ಸಾವಿರಕ್ಕೆ ಹೆಚ್ಚಿಸಲಾಗಿದೆ.

ADVERTISEMENT

ಹೊಸ ತೆರಿಗೆ ಪದ್ಧತಿಯಲ್ಲಿ

  • ₹3ಲಕ್ಷದಿಂದ ₹7ಲಕ್ಷವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ,

  • ₹7ಲಕ್ಷದಿಂದ ₹10ಲಕ್ಷವರೆಗಿನ ಆದಾಯಕ್ಕೆ ಶೇ 10ರಷ್ಟು,

  • ₹10ಲಕ್ಷದಿಂದ ₹12ಲಕ್ಷವರೆಗೆ ಶೇ 15ರಷ್ಟು ತೆರಿಗೆ

  • ₹12ಲಕ್ಷದಿಂದ ₹15ಲಕ್ಷವರೆಗೆ ಶೇ 20ರಷ್ಟು

  • ₹15 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಹೊಸ ತೆರಿಗೆ ಪದ್ಧತಿಯಿಂದ ಪ್ರತಿಯೊಬ್ಬ ವೇತನದಾರರಿಗೆ ಕನಿಷ್ಠ ₹17,500 ಉಳಿತಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.