ADVERTISEMENT

Budget | ಆರ್ಥಿಕ ಸ್ಥಿತಿಗತಿ ಕುರಿತು ಕೇಂದ್ರದಿಂದ 'ಶ್ವೇತಪತ್ರ' ಮಂಡನೆ: ನಿರ್ಮಲಾ

ಪಿಟಿಐ
Published 1 ಫೆಬ್ರುವರಿ 2024, 8:24 IST
Last Updated 1 ಫೆಬ್ರುವರಿ 2024, 8:24 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

(ಪಿಟಿಐ ಚಿತ್ರ)

ನವದೆಹಲಿ: ಆರ್ಥಿಕ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ 'ಶ್ವೇತಪತ್ರ' ಮಂಡಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ADVERTISEMENT

ಇಂದು ಲೋಕಸಭೆಯಲ್ಲಿ 2024–25ನೇ ಹಣಕಾಸು ವರ್ಷದ ಕೇಂದ್ರದ ಮಧ್ಯಂತರ ಬಜೆಟ್‌ ಮಂಡಿಸಿದ ನಿರ್ಮಲಾ, ಈ ಕುರಿತು ಮಾಹಿತಿ ನೀಡಿದ್ದಾರೆ.

ಆ ವರ್ಷಗಳ ಬಿಕ್ಕಟ್ಟನ್ನು ದಾಟಿ ಬಂದಿದ್ದೇವೆ. ಆರ್ಥಿಕತೆಯು ಈಗ ಸುಸ್ಥಿರವಾದ ಪ್ರಗತಿಯ ಪಥದಲ್ಲಿ, ಸರ್ವಾಂಗೀಣ ಅಭಿವೃದ್ಧಿಯ ಹಾದಿಯಲ್ಲಿದೆ. 2014ರವರೆಗೂ ನಾವೆಲ್ಲಿದ್ದೆವು ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ಹಿಂತಿರುಗಿ ನೋಡಲು ಇದು ಸಕಾಲ. ಆ ಕಾಲದ ದುರಾಡಳಿತದಿಂದ ಪಾಠ ಕಲಿಯುವುದಷ್ಟೇ ಇದರ ಹಿಂದಿನ ಉದ್ದೇಶ. ಈ ಕುರಿತು ಸರ್ಕಾರವು ಶ್ವೇತ ಪತ್ರವನ್ನು ಸಂಸತ್ತಿನ ಮುಂದಿಡಲಿದೆ ಎಂದು ಹೇಳಿದ್ದಾರೆ.

ದೇಶದ ಆಡಳಿತ, ಪ್ರಗತಿ ಮತ್ತು ಕಾರ್ಯಕ್ಷಮತೆ, ಪರಿಣಾಮಕಾರಿ ಕಾರ್ಯ ನಿರ್ವಹಣೆ ಹಾಗೂ ಜನ ಕಲ್ಯಾಣದ ಇಚ್ಛಾಶಕ್ತಿ ಸಹಿತವಾದ ಕಾರ್ಯಗಳು ಸರ್ಕಾರದ ಮೇಲೆ ಜನರು ನಂಬಿಕೆ, ವಿಶ್ವಾಸವಿರಿಸುವಂತಾಗಿದ್ದು, ಅವರ ಆಶೀರ್ವಾದ ದೊರೆಯಲು ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಒಳ್ಳೆಯ ಉದ್ದೇಶ, ನೈಜ ಬದ್ಧತೆ ಮತ್ತು ಕಠಿಣ ಪರಿಶ್ರಮದೊಂದಿಗೆ 'ವಿಕಸಿತ ಭಾರತ'ದ ಗುರಿ ಸಾಧನೆಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂಬುದು ಜನರ ಅರಿವಿಗೆ ಬರುವಂತಾಗಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್ ಕೇಂದ್ರದ ಮಧ್ಯಂತರ ಬಜೆಟ್ 2024 ಭಾಷಣದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.