ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ 3.0 ಅವಧಿಯ ಚೊಚ್ಚಲ ಬಜೆಟ್ ಅನ್ನು ಮಂಗಳವಾರ ಮಂಡಿಸಿದ್ದು, ಹೊಸ ತೆರಿಗೆ ಪದ್ಧತಿಯಿಂದ ₹17,500 ಉಳಿತಾಯವಾಗಲಿದೆ ಎಂದಿದ್ದಾರೆ.
ಆದಾಯ ತೆರಿಗೆಯ ಹಳೆಯ ಪದ್ಧತಿಯನ್ನು ಹಾಗೇ ಉಳಿಸಿರುವ ಅವರು, ವೇತನದಾರರು ಹೊಸ ತೆರಿಗೆ ಪದ್ಧತಿಯಿಂದ ಹೆಚ್ಚಿನ ಉಳಿತಾಯವಾಗಲಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ₹75 ಸಾವಿರಕ್ಕೆ ಶೇ 50ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ.
ಹೊಸ ತೆರಿಗೆ ಪದ್ಧತಿಯು 2024ರ ಏ. 1ರಿಂದ ಜಾರಿಗೆ ಬರಲಿದ್ದು, ಇದು 2025–26ನೇ ಅಸೆಸ್ಮೆಂಟ್ ಸಾಲಿಗೆ ಅನ್ವಯಿಸಲಿದೆ.
ಆದಾಯ ಮಿತಿ (2023– 24) | ಆದಾಯ ಮಿತಿ (2024–25) | ತೆರಿಗೆ ಪ್ರಮಾಣ |
₹3ಲಕ್ಷವರೆಗೆ | ₹3 ಲಕ್ಷವರೆಗೆ | ಇಲ್ಲ |
₹3ಲಕ್ಷದಿಂದ ₹6ಲಕ್ಷವರೆಗೆ | ₹3ಲಕ್ಷದಿಂದ ₹7ಲಕ್ಷವರೆಗೆ | ಶೇ 5ರಷ್ಟು |
₹6ಲಕ್ಷದಿಂದ ₹9ಲಕ್ಷವರೆಗೆ | ₹7ಲಕ್ಷದಿಂದ ₹10ಲಕ್ಷವರೆಗೆ | ಶೇ 10ರಷ್ಟು |
₹9ಲಕ್ಷದಿಂದ ₹12ಲಕ್ಷವರೆಗೆ | ₹10ಲಕ್ಷದಿಂದ ₹12ಲಕ್ಷವರೆಗೆ | ಶೇ 15ರಷ್ಟು |
₹12 ಲಕ್ಷದಿಂದ ₹15 ಲಕ್ಷ | ₹12ಲಕ್ಷದಿಂದ ₹15ಲಕ್ಷವರೆಗೆ | ಶೇ 20ರಷ್ಟು |
₹15 ಲಕ್ಷ ಮೇಲ್ಪಟ್ಟು | ₹15ಲಕ್ಷ ಮೇಲ್ಪಟ್ಟು | ಶೇ 30 |
ಹೊಸ ತೆರಿಗೆ ಪದ್ಧತಿಯಲ್ಲಿ ಹಿಂದಿನಂತೆಯೇ ಆದಾಯ ತೆರಿಗೆ ಮಿತಿ ₹3ಲಕ್ಷದಿಂದ ಆರಂಭವಾಗಲಿದೆ. ₹3ಲಕ್ಷದಿಂದ ₹7ಲಕ್ಷವರೆಗೆ ಶೇ 5ರಷ್ಟು ತೆರಿಗೆ, ₹7ಲಕ್ಷದಿಂದ ₹10ಲಕ್ಷವರೆಗೆ ಶೇ 10ರಷ್ಟು, ₹10ಲಕ್ಷದಿಂದ ₹12ಲಕ್ಷವರೆಗೆ ಶೇ 15ರಷ್ಟು, ₹12ಲಕ್ಷದಿಂದ ₹15ಲಕ್ಷವರೆಗೆ ಶೇ 20ರಷ್ಟು ಹಾಗೂ ₹15ಲಕ್ಷಕ್ಕೂ ಹೆಚ್ಚಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.
ಸದ್ಯ ಜಾರಿಯಲ್ಲಿರುವ ಹೊಸ ತೆರಿಗೆ ಪದ್ಧತಿಯಲ್ಲೂ ತೆರಿಗೆ ಮಿತಿ ₹3ಲಕ್ಷದಷ್ಟೇ ಇದೆ. ಆದರೆ ಶೇ 5ರಷ್ಟು ತೆರಿಗೆಯ ಮಿತಿಯು ₹3ಲಕ್ಷದಿಂದ ₹6ಲಕ್ಷವರೆಗೆ ಇದೆ. ಅದರಂತೆಯೇ ಶೇ 10ರಷ್ಟು ತೆರಿಗೆ ಮಿತಿಯು ₹6ಲಕ್ಷದಿಂದ ₹9ಲಕ್ಷವರೆಗೆ ಇದೆ. ₹9ಲಕ್ಷದಿಂದ ₹12ಲಕ್ಷವರೆಗೆ ಶೇ 15ರಷ್ಟು, ₹12ರಿಂದ ₹15ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟು ಹಾಗು ₹15ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ಆದಾಯ ತೆರಿಗೆ ನಿಗದಿಪಡಿಸಲಾಗಿದೆ.
ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅಲ್ಲಿ ಈಗಲೂ ಆದಾಯ ತೆರಿಗೆ ಮಿತಿ ₹2.5 ಲಕ್ಷದಷ್ಟೇ ಇದೆ. ಶೇ 5ರ ತೆರಿಗೆ ಮಿತಿಯು ₹2.5 ಲಕ್ಷದಿಂದ ₹5 ಲಕ್ಷವರೆಗೆ ಇದೆ. ₹5ಲಕ್ಷದಿಂದ ₹10ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟಿದೆ. ₹10 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ. ಹಳೇ ಆದಾಯ ತೆರಿಗೆ ಪದ್ಧತಿಯಲ್ಲಿ ಹಿರಿಯ ನಾಗರಿಕೆರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.
ಆದಾಯ ಮಿತಿ | ವೈಯಕ್ತಿಕ ಆದಾಯ (60 ವರ್ಷದ ಒಳಗಿನವರು) | ಹಿರಿಯ ನಾಗರಿಕರು (60ರಿಂದ 80 ವರ್ಷ ಒಳಗಿನವರು) | 80 ವರ್ಷ ಮೇಲಿನವರು |
₹2.5ಲಕ್ಷವರೆಗೆ | ಇಲ್ಲ | ಇಲ್ಲ | ಇಲ್ಲ |
₹2.5ಲಕ್ಷದಿಂದ ₹3ಲಕ್ಷವರೆಗೆ | ಶೇ 5 | ಶೇ 5 | ಇಲ್ಲ |
₹3ಲಕ್ಷದಿಂದ ₹5ಲಕ್ಷವರೆಗೆ | ಶೇ 5 | ಶೇ 5 | ಇಲ್ಲ |
₹5ಲಕ್ಷದಿಂದ ₹10ಲಕ್ಷವರೆಗೆ | ಶೇ 20 | ಶೇ 20 | ಶೇ 20 |
₹10 ಲಕ್ಷ ಮೇಲಿನ ಆದಾಯ | ಶೇ 30 | ಶೇ 30 | ಶೇ 30 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.