Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಿದರು.
ಪ್ರಜಾವಾಣಿ ವೆಬ್ ಡೆಸ್ಕ್
Published 23 ಜುಲೈ 2024, 11:39 IST
Last Updated 23 ಜುಲೈ 2024, 11:39 IST
ನಿತೀಶ್ ಕುಮಾರ್
(ಪಿಟಿಐ ಚಿತ್ರ)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿದರು. ಅವರು ಸತತವಾಗಿ ಮಂಡಿಸಿದ ಏಳನೇ ಬಜೆಟ್ ಇದಾಗಿತ್ತು. ಬಜೆಟ್ ಮಂಡನೆಯ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ನೀಡಲಾಗಿತ್ತು.
ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಹಿ–ಖಾತಾ(ಕೆಂಪು ವಸ್ತ್ರದಲ್ಲಿ ಸುತ್ತಿದ ದಾಖಲೆ) ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್ ಭವನದತ್ತ ತೆರಳಿದ್ದಾರೆ.
ಬಿಳಿ ಬಣ್ಣದ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್ ಕಂದು ನೇರಳೆ ಬಣ್ಣದ ಅಂಚು ಹೊಂದಿರುವ ಬಿಳಿ ಸೀರೆ ಉಟ್ಟು ಬಂದಿರುವ ಅವರು ಸಂಸತ್ ಭವನದತ್ತ ತೆರಳಿದ್ದಾರೆ. ತಮ್ಮ ಐದನೇ ಬಜೆಟ್ ಮಂಡನೆ ವೇಳೆ ಧಾರವಾಡದ ಜಿಲ್ಲೆಯ ನವಲಗುಂದದ ಕಸೂತಿ ಕಲೆ ಇರುವ ಸೀರೆ ಉಟ್ಟಿದ್ದರು.
2019ರ ಬಜೆಟ್ ಮಂಡನೆ ವೇಳೆ ಗೋಲ್ಡನ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯಟ್ಟು ಮಿಂಚಿದ್ದರು. 2020ರಲ್ಲಿ ಹಳದಿ ಹಾಗೂ ನೀಲಿ ಮಿಶ್ರಿತ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯಲ್ಲಿ ಮತ್ತು 2022ರಲ್ಲಿ ಕಂದು ಬಣ್ಣದ ಕೈಮಗ್ಗ ಸೀರೆ ಧರಿಸಿದ್ದರು. 2023ರ ಮಧ್ಯಂತರ ಬಜೆಟ್ ವೇಳೆ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.
ಬಜೆಟ್ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೋಗಯ್ ಅವರು ಕಿಡಿಕಾರಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಆಪ್ತರಾಗಿರುವ ಕೋಟ್ಯದಿಪತಿಗಳಿಗೆ ಸಹಾಯ ಮಾಡಲು ಈ ಬಜೆಟ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಜೆಟ್ ಪ್ರತಿಗಾಗಿ ಸಾರ್ವಜನಿಕರು Union Budget Mobile App ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬಹುದು.
ಈ ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ತೀವ್ರ ನಿರೀಕ್ಷೆ ಹೊಂದಲಾಗಿದೆ.
2024-25ರ ಪೂರ್ಣ ಬಜೆಟ್ ಮಂಡಿಸುವ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಸಂಪ್ರದಾಯದ ಪ್ರಕಾರ, ಹಣಕಾಸು ಸಚಿವರು ಸಂಸತ್ತಿಗೆ ತೆರಳುವ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರು. ಕೇಂದ್ರ ಬಜೆಟ್ ಮಂಡಿಸಲು ಸಂಸತ್ತಿಗೆ ತೆರಳುವ ಮುನ್ನ ಸೀತಾರಾಮನ್ ಅವರಿಗೆ ಮುರ್ಮು ಅವರು 'ದಹಿ-ಚಿನಿ' (ಮೊಸರು-ಸಕ್ಕರೆ) ನೀಡಿದರು.
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದ್ದು ಮೋದಿ ಅವರು ಹೇಗೆ ಸಮತೋಲನ ಮಾಡಿದ್ದಾರೆ ಎಂಬುದರ ಬಗ್ಗೆ ದೇಶದ ಚಿತ್ತ ನೆಟ್ಟಿದೆ
ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು ಈ ಹಿನ್ನೆಲೆಯಲ್ಲಿ ಷೇರುಪೇಟೆ ಜಿಗಿತ ಕಂಡಿದೆ. ಸೆನ್ಸೆಕ್ಸ್ 264 ಅಂಕ ಜಿಗಿತ ಕಂಡಿದೆ.
ಅಧಿವೇಶನ ಪ್ರಾರಂಭ: ಲೋಕಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಸ್ಪೀಕರ್ ಓಂ ಬಿರ್ಲಾ.
ಈ ಬಜೆಟ್‌ನಲ್ಲಿ ಷೇರು ಹೂಡಿಕೆಯಲ್ಲಿನ LTCGs ತೆರಿಗೆ ಏರಿಕೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಹೂಡಿಕೆದಾರರು ತೀವ್ರ ಗಮನ ಹರಿಸುತ್ತಿದ್ದಾರೆ. ಒಂದು ವೇಳೆ ಈ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೇ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಸ್ವಲ್ಪ ಮಟ್ಟಿನ ಚೇತರಿಕೆ ಸಿಗಲಿದೆ ಎನ್ನಲಾಗಿದೆ.
ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಶುರು
ಸತತ ಮೂರನೇ ಬಾರಿಗೆ ಪ್ರಧಾನಿಯಾಗುವ ಮೂಲಕ ನರೇಂದ್ರ ಮೋದಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಮೋದಿ ಅವರ ಅಭಿವೃದ್ದಿ ಕಾರ್ಯಕ್ರಮಗಳಿಂದ ಇದೆಲ್ಲ ಸಾಧ್ಯವಾಗಿದೆ– ನಿರ್ಮಲಾ
ಕೃಷಿ ಮತ್ತು ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ ಹಂಚಿಕೆ– ನಿರ್ಮಲಾ
ಈ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ: ನಿರ್ಮಲಾ ಸೀತಾರಾಮನ್
ದೇಶದಾದ್ಯಂತ 26 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಆಧುನಿಕರಣಕ್ಕೆ ಒತ್ತು ನೀಡಲಾಗಿದೆ– ನಿರ್ಮಲಾ
ಬಜೆಟನ್‌ಲ್ಲಿ ಎನ್‌ಡಿಎ ನಾಯಕರ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಒತ್ತು ನೀಡಿದ್ದು ಕಂಡು ಬರುತ್ತಿದೆ
ಹೈದರಾಬಾದ್ - ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ ಘೋಷಣೆ ವಿಶಾಖಪಟ್ಟಣಂ - ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ
ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ 2.66 ಲಕ್ಷ ಕೋಟಿ ರೂಪಾಯಿ ಮುದ್ರಾ ಲೋನ್ ಮಿತಿ ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಳ
2.66 ಲಕ್ಷ ಕೋಟಿ ಮೀಸಲು ದೇಶಾದಾದ್ಯಂತ ಗ್ರಾಮೀಣಾಭಿವೃದ್ಧಿಗೆ ಒತ್ತು
MSMEs ಗಳಿಗೆ ಕ್ರೆಡಿಟ್ ಗ್ಯಾರಂಜಿ ಯೋಜನೆ ವಿಸ್ತರಣೆ– ನೂರು ಕೋಟಿವರೆಗೆ ಸಾಲಸೌಲಭ್ಯ
ಎನ್‌ಡಿಎ ಭಾಗವಾಗಿರುವ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ನೆರವು ಘೋಷಣೆ * ಕೈಗಾರಿಕೆಗಳ ಕಾರ್ಮಿಕರಿಗೆ ಬಾಡಿಗೆ ಮನೆ ಸೌಲಭ್ಯ * ದೇಶದಲ್ಲಿ 12 ಹೊಸ ಇಂಡಸ್ಟ್ರಿಯಲ್ ಪಾರ್ಕ್‌ಗಳ ಘೋಷಣೆ * ಕೈಗಾರಿಕೆಗಳಲ್ಲಿ ಇಂಟರ್ನ್‌ಶಿಪ್ ಮಾಡುವವರಿಗೆ ₹5000 ರೂ.
ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಮಹಿಳಾ ವಸತಿ ನಿಲಯಗಳನ್ನು ಸ್ಥಾಪಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪ್ರವಾಹ ಪೀಡಿತ ಬಿಹಾರಕ್ಕೆ 11 ಸಾವಿರ ಕೋಟಿ ಅನುದಾನ ಘೋಷಣೆ
ಆಯ್ದ ನಗರಗಳಲ್ಲಿ 100 ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ಕ್ರಮ ಪಿಎಂ ಸೂರ್ಯ ಘರ್ ಮುಫ್ತ್ ಬಿಜಲೀ ಯೋಜನೆಗೆ ಉತ್ತಮ ಸ್ಪಂದನೆ ಬಿಹಾರದ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ: ಗಯಾ, ಬೋಧ್‌ಗಯಾಗಳನ್ನು ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿಗೆ ಅನುದಾನ ಒಡಿಶಾ ದೇವಾಲಯಗಳ ಅಭಿವೃದ್ಧಿಗೂ ಹಣಕಾಸು ನೆರವು ಪ್ರವಾಸಿ ಸ್ಥಳವಾಗಿ ನಳಂದಾ ವಿವಿ ಅಭಿವೃದ್ಧಿಗೆ ಕ್ರಮ
ಆರ್ಥಿಕತೆಯಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲು 2024-25ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂಬತ್ತು ಆದ್ಯತೆ ಕ್ಷೇತ್ರಗಳನ್ನು ಘೋಷಿಸಿದ್ದಾರೆ. 9 ಆದ್ಯತೆ ಕ್ಷೇತ್ರಗಳಲ್ಲಿ ಉತ್ಪಾದಕತೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ,ನಾವೀನ್ಯತೆ ಮತ್ತು ಸುಧಾರಣೆಗಳು ಸೇರಿವೆ. ಪ್ರಧಾನಿ ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್ ಮಂಡನೆಯಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.
ಚಿನ್ನ ಬೆಳ್ಳಿ ಮೇಲೆ ಶೇ.6, ಪ್ಲಾಟಿನಂ ಮೇಲೆ ಶೇ.6.5 ಸುಂಕ ಕಡಿತ, ತಾಮ್ರದ ಮೇಲೂ ತೆರಿಗೆ ಕಡಿತ
ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ
ತೆರಿಗೆದಾರರಿಗೆ ಸಿಹಿ ಸುದ್ದಿ 2 ಘೋಷಣೆಗಳು ಹೊಸ ರಿಜೀಮ್ ಸ್ಟ್ಯಾಂಡರ್ಡ್ ಡಿಡಕ್ಷನ್ ₹50 ಸಾವಿರದಿಂದ ₹75000 Rs. ಪೆನ್ಷನ್ ಡಿಡಕ್ಷನ್ - 15000 ದಿಂದ 25000 0-3 ಲಕ್ಷ - ಶೂನ್ಯ 3-7 - 5% 7-10 ಲಕ್ಷಕ್ಕೆ - 10% 10-12 ಲಕ್ಷಕ್ಕೆ - 15% 12-15 ಲಕ್ಷಕ್ಕೆ - 20% Above 15 ಲಕ್ಷ - 30%
ಇಂದು ಮಂಡನೆಯಾದ ಕೇಂದ್ರ ಬಜೆಟ್, ಕೇಲವ ಆಂಧ್ರ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷವಾಗಿ ಮಂಡಿಸಲಾದ ಬಜೆಟ್ ಆಗಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಂಗಳವಾರ ವಾಗ್ದಾಳಿ ನಡೆಸಿದೆ.
ನರೇಂದ್ರ ಮೋದಿ ಅವರ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ, ಮಹಿಳೆಯರಿಗೆ ಅತಿಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಇದಾಗಿದೆ. 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆ ಪೈಕಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ ಅನುದಾನ ನೀಡಿ 4 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಮಾನವ ಸಂಪನ್ಮೂಲ ಸದ್ಬಳಕೆಗೆ ಆದ್ಯತೆ ಕೊಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್ ನಲ್ಲಿದೆ.–ಎಚ್.ಡಿ. ಕುಮಾರಸ್ವಾಮಿ
ಹಿಮಾಚಲ ಪ್ರದೇಶಕ್ಕೆ ಸಂತ್ರಸ್ತರ ನಿಧಿ ಕೊಡುವ ನಿರ್ಧಾರವನ್ನು ಬಜೆಟ್‌ನಲ್ಲಿ ಕೈಗೊಳ್ಳಲಾಗಿದೆ. ಇದು ತುಂಬಾ ಖುಷಿ ನೀಡಿದೆ– ಕಂಗನಾ ರಣಾವತ್
ಕೆಲವರಿಗಾಗಿ ಮಂಡಿಸಲಾದ ಬಜೆಟ್. ಇದರಲ್ಲಿ ಏನೂ ಇಲ್ಲ. ಅವರು ಭಾರಿ (ಬಿಜೆಪಿ) ಭರವಸೆ ನೀಡಿದ್ದರು. ಏನೂ ಈಡೇರಿಸಿಲ್ಲ.– ಮಲ್ಲಿಕಾರ್ಜುನ ಖರ್ಗೆ