ADVERTISEMENT

Budget 2024 | 'ಎನ್‌ಪಿಎಸ್ ವಾತ್ಸಲ್ಯ' ಯೋಜನೆ ಎಂದರೇನು? ಪ್ರಯೋಜನಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2024, 10:59 IST
Last Updated 23 ಜುಲೈ 2024, 10:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ರಾಯಿಟರ್ಸ್)

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೂತನ 'ಎನ್‌ಪಿಎಸ್ ವಾತ್ಸಲ್ಯ' ಯೋಜನೆಯನ್ನು ಪರಿಚಯಿಸಲಾಗಿದೆ.

ADVERTISEMENT

ದಾಖಲೆಯ ಸತತ 7ನೇ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಏನಿದು 'ಎನ್‌ಪಿಎಸ್ ವಾತ್ಸಲ್ಯ' ಯೋಜನೆ?

ಅಪ್ರಾಪ್ತರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್) ರೂಪದಲ್ಲಿ ಹೊಸತಾದ ವಾತ್ಸಲ್ಯ ಯೋಜನೆಯನ್ನು ಘೋಷಿಸಲಾಗಿದೆ.

ಆ ಮೂಲಕ ಪೋಷಕರು ತಮ್ಮ ಮಕ್ಕಳಿಗೆ, ಚಿಕ್ಕ ವಯಸ್ಸಿನಿಂದಲೇ ಪಿಂಚಣಿ ಯೋಜನೆ ಪ್ರಾರಂಭಿಸಬಹುದಾಗಿದೆ.

ಈ ಯೋಜನೆಯ ಅಡಿಯಲ್ಲಿ ಮಗುವಿಗೆ 18 ವರ್ಷ ತುಂಬಿದಾಗ, ಸಾಮಾನ್ಯ ರಾಷ್ಟ್ರೀಯ ಪಿಂಚಣಿ ಯೋಜನೆಯಾಗಿ ಪರಿವರ್ತನೆಯಾಗಲಿದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಕ್ಕಳ ಭವಿಷ್ಯದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ನೆರವಾಗಲಿದೆ. ಅಲ್ಲದೆ ಮಕ್ಕಳು ಪ್ರೌಢಾವಸ್ಥೆಗೆ ತಲುಪಿದಾಗ ಭದ್ರ ಆರ್ಥಿಕ ಅಡಿಪಾಯ ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.