ADVERTISEMENT

ಜಗತ್ತು ಭಾರತವನ್ನು ಪ್ರಜ್ವಲಿಸುವ ನಕ್ಷತ್ರದಂತೆ ನೋಡುತ್ತಿದೆ: ನಿರ್ಮಲಾ ಸೀತಾರಾಮನ್

ಪಿಟಿಐ
Published 1 ಫೆಬ್ರುವರಿ 2023, 7:14 IST
Last Updated 1 ಫೆಬ್ರುವರಿ 2023, 7:14 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಇಡೀ ಜಗತ್ತು ಭಾರತವನ್ನು ಪ್ರಜ್ವಲಿಸುವ ನಕ್ಷತ್ರದಂತೆ ನೋಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಇಂದು 2023–24ನೇ ಸಾಲಿನ ಬಜೆಟ್‌ ಮಂಡನೆ ಮಂಡಿಸಿದ್ದಾರೆ.

‘ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ ಆರೋಗ್ಯಕರ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿರುವುದರಿಂದ ಇಡೀ ಜಗತ್ತಿನ ಗಮನ ಸೆಳೆದಿದೆ. ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯು ಶೇಕಡ 7 ರಷ್ಟಿದೆ’ ಎಂದು ಹೇಳಿದರು.

ADVERTISEMENT

ಭಾರತದ ಸಾಧನೆಗಳನ್ನು ಜಗತ್ತು ಮೆಚ್ಚಲಿದೆ ಎಂದು ಅವರು ಬಣ್ಣಿಸಿದರು.

ಈ ವರ್ಷದ ಶೇಕಡ 7ರಷ್ಟು ಬೆಳವಣಿಗೆ ದರಕ್ಕೆ ಹೋಲಿಸಿದರೆ, ಭಾರತದ ಆರ್ಥಿಕತೆಯು 2023–24ರ ಆರ್ಥಿಕ ವರ್ಷದಲ್ಲಿ ಶೇ. 6.5ರಷ್ಟು ಬೆಳವಣಿಗೆಯಾಗಲಿದೆ. 2021–22ರಲ್ಲಿ ಈ ದರ ಶೇಕಡ 8.7ರಷ್ಟಿತ್ತು. ಭಾರತವು ಈಗಲೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.

ಸ್ವಾತಂತ್ರ್ಯ ಭಾರತದಲ್ಲಿ ಸತತ ಐದನೇ ಬಜೆಟ್ ಮಂಡಿಸುತ್ತಿರುವ 6ನೇ ಹಣಕಾಸು ಸಚಿವೆ ಎಂಬ ಖ್ಯಾತಿ ನಿರ್ಮಲಾ ಸೀತಾರಾಮನ್ ಅವರದ್ದು. 2019ರಿಂದ 2023ರವರೆಗೆ ಇದು ಅವರು ಮಂಡಿಸುತ್ತಿರುವ ಸತತ ಐದನೇ ಬಜೆಟ್ ಇದಾಗಿದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.