ADVERTISEMENT

ಕೇಂದ್ರ ಸರ್ಕಾರಕ್ಕೆ ವರಮಾನ ಕೊರತೆ

ಪಿಟಿಐ
Published 13 ಮಾರ್ಚ್ 2019, 19:57 IST
Last Updated 13 ಮಾರ್ಚ್ 2019, 19:57 IST
   

ನವದೆಹಲಿ: ಕೇಂದ್ರ ಸರ್ಕಾರ ತೆರಿಗೆ ವರಮಾನ ಕೊರತೆ ಎದುರಿಸುತ್ತಿದೆ. ಹೀಗಾಗಿ, ಎರಡನೇ ಮಧ್ಯಂತರ ಲಾಭಾಂಶ ಪಾವತಿಸುವಂತೆ ‘ಐಒಸಿ’ ಮತ್ತು ‘ಒಎನ್‌ಜಿಸಿ’ಯಂತಹ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆಒತ್ತಾಯಿಸುತ್ತಿದೆ.

ಈ ಸಂಬಂಧ ಐಒಸಿ ಇದೇ 19ರಂದು ಆಡಳಿತ ಮಂಡಳಿ ಸಭೆ ಕರೆದಿದೆ. ಆದರೆ, ತನ್ನ ಬಳಿ ಹೆಚ್ಚುವರಿ ನಗದು ಇಲ್ಲ ಎನ್ನುವ ಮೂಲಕ ಎರಡನೇ ಮಧ್ಯಂತರ ಲಾಭಾಂಶ ಪಾವತಿಸಲು ‘ಒಎನ್‌ಜಿಸಿ’ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.

ನಿಯಮಗಳ ಪ್ರಕಾರ, ಕಂಪನಿಯು ಲಾಭಾಂಶ ಘೋಷಿಸಿದ ಒಂದು ತಿಂಗಳ ಒಳಗೆ ಇನ್ನೊಂದು ಬಾರಿ ಲಾಭಾಂಶ ನೀಡುವಂತಿಲ್ಲ. ಇಂತಹ ಲಾಭಾಂಶ ನೀಡಲು ಕಂಪನಿಗಳು ‘ಸೆಬಿ’ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ADVERTISEMENT

ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದಕೇಂದ್ರ ಸರ್ಕಾರ ಶೇ 3.4ರ ವಿತ್ತೀಯ ಕೊರತೆ ಗುರಿ ತಲುಪಲು ಹೆಣಗಾಡುತ್ತಿದೆ. ₹ 30 ಸಾವಿರ ಕೋಟಿಯಿಂದ ₹ 40 ಸಾವಿರ ಕೋಟಿಗಳವರೆಗೆ ಜಿಎಸ್‌ಟಿ ಕೊರತೆ ಎದುರಾಗುವ ಅಂದಾಜು ಮಾಡಲಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿಯೂ ಇಷ್ಟೇ ಮೊತ್ತದ ಕೊರತೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.