ADVERTISEMENT

ಬಿಎಸ್‌ಎನ್‌ಎಲ್‌: 92,700 ನೌಕರರಿಂದ ವಿಆರ್‌ಎಸ್‌ ಆಯ್ಕೆ

ಪಿಟಿಐ
Published 3 ಡಿಸೆಂಬರ್ 2019, 16:47 IST
Last Updated 3 ಡಿಸೆಂಬರ್ 2019, 16:47 IST
ಬಿಎಸ್‌ಎನ್‌ಎಲ್‌
ಬಿಎಸ್‌ಎನ್‌ಎಲ್‌   

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳ ಒಟ್ಟು 92,700 ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಆಯ್ಕೆ ಮಾಡಿಕೊಂಡಿದ್ದಾರೆ.

ಇದರಲ್ಲಿ ಬಿಎಸ್‌ಎನ್‌ಎಲ್‌ದ 78,300 ಮತ್ತು ಎಂಟಿಎನ್‌ಎಲ್‌ದ 14,378 ನೌಕರರು ಸೇರಿದ್ದಾರೆ.

‘ವಿಆರ್‌ಎಸ್‌’ ಯೋಜನೆ ಆಯ್ಕೆ ಮಾಡಿಕೊಳ್ಳಲು ಮಂಗಳವಾರ (ಡಿ. 3) ಕೊನೆಯ ದಿನವಾಗಿತ್ತು. ನಿಗಮದ ಎಲ್ಲ ವೃತ್ತಗಳಿಂದ ಬಂದಿರುವ ಕೋರಿಕೆಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಇದೇ ಸಂದರ್ಭದಲ್ಲಿ 6 ಸಾವಿರ ನೌಕರರು ಸೇವಾ ನಿವೃತ್ತರಾಗಲಿದ್ದಾರೆ. ಹೀಗಾಗಿ ಸಿಬ್ಬಂದಿ ಸಂಖ್ಯೆಯು ಒಟ್ಟಾರೆ 82 ಸಾವಿರದಷ್ಟು ಕಡಿಮೆಯಾಗಲಿದೆ’ ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ ಪಿ. ಕೆ. ಪುರ್ವರ್ ಅವರು ತಿಳಿಸಿದ್ದಾರೆ.

ADVERTISEMENT

‘ಎಂಟಿಎನ್‌ಎಲ್‌ ನಿಗದಿಪಡಿಸಿದ್ದ ಗುರಿಗಿಂತ (13,650) ಹೆಚ್ಚಿನ ಸಿಬ್ಬಂದಿ ವಿಆರ್‌ಎಸ್‌ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಅಧ್ಯಕ್ಷ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.