ADVERTISEMENT

‘ಆಧಾರ್‌ ಬಳಸಿಯೂ ₹ 50 ಸಾವಿರಕ್ಕಿಂತ ಅಧಿಕ ಮೊತ್ತದ ವಹಿವಾಟು ನಡೆಸಬಹುದು

ಪಿಟಿಐ
Published 7 ಜುಲೈ 2019, 2:10 IST
Last Updated 7 ಜುಲೈ 2019, 2:10 IST
   

ನವದೆಹಲಿ: ‘ಆಧಾರ್‌ ಬಳಸಿಯೂ ₹ 50 ಸಾವಿರಕ್ಕಿಂತ ಅಧಿಕ ಮೊತ್ತದ ನಗದು ಪಡೆಯಬಹುದು ಅಥವಾ ಠೇವಣಿ ಇಡಬಹುದು’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

‘ಇನ್ನುಮುಂದೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳುನಗದು ವರ್ಗಾವಣೆಗೆ ಪ್ಯಾನ್‌ ಬದಲಾಗಿ ಆಧಾರ್‌ ಅನ್ನು ಒಪ್ಪಿಕೊಳ್ಳುವಂತೆ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಲಿವೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿವರ (ರಿಟರ್ನ್‌) ಸಲ್ಲಿಸಲು ಆಧಾರ್‌ ಬದಲಿಗೆ ಪ್ಯಾನ್‌ ಅಥವಾ ಪ್ಯಾನ್‌ ಬದಲಿಗೆ ಆಧಾರ್‌ ಬಳಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

‘ಕೆಲವರು ಪ್ಯಾನ್‌ ಬಳಸಿದರೆ, ಕೆಲವರು ಆಧಾರ್‌ ಬಳಸುತ್ತಾರೆ. ಹೀಗಾಗಿ ಬ್ಯಾಂಕ್‌ಗಳು ಎರಡನ್ನೂ ಒಪ್ಪಿಕೊಳ್ಳಲು ಸಿದ್ಧವಿರಬೇಕು.ದೇಶದಲ್ಲಿ 41 ಕೋಟಿಗೂ ಅಧಿಕ ಪ್ಯಾನ್‌ ಇದ್ದು ಅದರಲ್ಲಿ 22 ಕೋಟಿಯಷ್ಟನ್ನು ಆಧಾರ್‌ ಜತೆ ಜೋಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.