ADVERTISEMENT

10 ವರ್ಷದಲ್ಲಿ 853 ಭಾರತೀಯ ಕಂದಾಯ ಸೇವೆ ಅಧಿಕಾರಿಗಳಿಂದ ವಿಆರ್‌ಎಸ್‌

ಪಿಟಿಐ
Published 25 ನವೆಂಬರ್ 2024, 13:00 IST
Last Updated 25 ನವೆಂಬರ್ 2024, 13:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಳೆದ 10 ವರ್ಷಗಳಲ್ಲಿ ಒಟ್ಟು 853 ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್‌) ಅಧಿಕಾರಿಗಳು ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.

ಇದರಲ್ಲಿ 383 ಐಆರ್‌ಎಸ್‌ ಅಧಿಕಾರಿಗಳು (ಆದಾಯ ತೆರಿಗೆ) ಮತ್ತು 470 ಐಆರ್‌ಎಸ್‌ ಅಧಿಕಾರಿಗಳು (ಕಸ್ಟಮ್ಸ್‌ ಮತ್ತು ಪರೋಕ್ಷ ತೆರಿಗೆ) 2014 ರಿಂದ 2024ರ ಅವಧಿಯಲ್ಲಿ ವಿಆರ್‌ಎಸ್‌ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.

2,746 ಕೆ.ಜಿ ಚಿನ್ನ ಸ್ವಾಧೀನ: 2019–20 ರಿಂದ 2024–25ರ ಅಕ್ಟೋಬರ್‌ 31ರ ವರೆಗೆ ಕಳ್ಳಸಾಗಣೆ ಮಾಡುತ್ತಿದ್ದ 2,746 ಕೆ.ಜಿ ಚಿನ್ನವನ್ನು ಕೇರಳದ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್‌ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಜಪ್ತಿ ಮಾಡಿದೆ. ವಿದೇಶಿ ಪ್ರಜೆಗಳಿಂದ ಇದೇ ಅವಧಿಯಲ್ಲಿ 112 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಚಿನ್ನವನ್ನು ನಿಯಮಾವಳಿ ಪ್ರಕಾರ, ವಿಲೇವಾರಿ ಮಾಡಲಾಗುತ್ತದೆ ಎಂದು ಸಚಿವರು ಪ್ರತ್ಯೇಕ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.