ADVERTISEMENT

ಸೆನ್ಸೆಕ್ಸ್‌ ಗುಚ್ಛಕ್ಕೆ ಅದಾನಿ ಎಂಟರ್‌ಪ್ರೈಸಸ್‌?

ಪಿಟಿಐ
Published 23 ಮೇ 2024, 15:45 IST
Last Updated 23 ಮೇ 2024, 15:45 IST
<div class="paragraphs"><p>ಅದಾನಿ (ಸಾಂದರ್ಭಿಕ ಚಿತ್ರ)</p></div>

ಅದಾನಿ (ಸಾಂದರ್ಭಿಕ ಚಿತ್ರ)

   

ರಾಯಿಟರ್ಸ್ ಚಿತ್ರ

ನವದೆಹಲಿ : ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯು ಬಿಎಸ್‌ಇ ಸೆನ್ಸೆಕ್ಸ್‌ 30ರ ಗುಚ್ಛಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಐಐಎಫ್‌ಎಲ್‌ ಅಲ್ಟರ್ನೇಟಿವ್‌ ರಿಸರ್ಚ್‌ ಸಂಸ್ಥೆಯ ವರದಿ ಹೇಳಿದೆ. 

ADVERTISEMENT

ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ 30 ಕಂಪನಿಗಳು ಈ ಗುಚ್ಛದಲ್ಲಿರುತ್ತವೆ. ಸದ್ಯ ಇದರಲ್ಲಿ ವಿಪ್ರೊ ಕೊನೆಯ ಸ್ಥಾನದಲ್ಲಿದೆ. ಅದಾನಿ ಎಂಟರ್‌ಪ್ರೈಸಸ್‌ನ ಮಾರುಕಟ್ಟೆ ಮೌಲ್ಯ ಏರಿಕೆಯಾಗುತ್ತಿದೆ.

ಹಾಗಾಗಿ ಅದಾನಿ ಕಂಪನಿಯು ವಿಪ್ರೊ ಕಂಪನಿಯನ್ನು ಬದಿಗೊತ್ತಿ ಅದರ ಸ್ಥಾನಕ್ಕೇರಬಹುದು ಎಂದು ವರದಿ ಹೇಳಿದೆ. ಇದರಿಂದ ಬಿಎಸ್‌ಇಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಷೇರಿನ ಮೌಲ್ಯದಲ್ಲಿ ಶೇ 8.01ರಷ್ಟು ಏರಿಕೆಯಾಗಿದ್ದು ಪ್ರತಿಷೇರಿನ ಬೆಲೆ ₹3391.20ಕ್ಕೆ ತಲುಪಿದೆ. 

ಎನ್‌ಡಿಟಿವಿ ಷೇರಿನ ಮೌಲ್ಯ ಶೇ 7.56ರಷ್ಟು ಅದಾನಿ ಪೋರ್ಟ್ಸ್‌ ಶೇ 4.77 ಎಸಿಸಿ ಶೇ 2.86 ಅದಾನಿ ಪವರ್‌ ಶೇ 2.97 ಅದಾನಿ ಟೋಟಲ್‌ ಗ್ಯಾಸ್‌ ಶೇ 2.30 ಅಂಬುಜಾ ಸಿಮೆಂಟ್ಸ್‌  ಶೇ 2.09 ಅದಾನಿ ವಿಲ್ಮರ್‌ ಶೇ 1.85 ಅದಾನಿ ಗ್ರೀನ್‌ ಎನರ್ಜಿ ಶೇ 1.25ರಷ್ಟು ಹಾಗೂ ಅದಾನಿ ಎನರ್ಜಿ ಸೆಲ್ಯೂಷನ್ಸ್‌ನ ಷೇರಿನ ಮೌಲ್ಯದಲ್ಲಿ ಶೇ 1.17ರಷ್ಟು ಹೆಚ್ಚಳವಾಗಿದೆ.  ಈ ಹತ್ತು ಕಂಪನಿಗಳು ಮಾರುಕಟ್ಟೆ ಮೌಲ್ಯವು ₹17.23 ಲಕ್ಷ ಕೋಟಿ ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.