ಹೊಸದಿಲ್ಲಿ: ಅದಾನಿ ಸಮೂಹವು ದೇಶದ ಹಲವು ಏರ್‌ಪೋರ್ಟ್‌ಗಳಿಗೆ ಬಿಡ್ ಸಲ್ಲಿಸಲಿದ್ದು, ಆ ಮೂಲಕ ದೇಶದ ಅತೀ ದೊಡ್ಡ ಏರ್‌ಪೋರ್ಟ್ ಆಪರೇಟರ್ ಆಗುವ ಉದ್ದೇಶ ಹೊಂದಿಗೆ ಎಂದು ಅದಾನಿ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಬನ್ಸಾಲ್ ಹೇಳಿದ್ದಾರೆ.
ಕಳೆದ ಬಾರಿ ಕೇಂದ್ರ ಸರ್ಕಾರವು ಏರ್‌ಪೋರ್ಟ್‌ಗಳ ಖಾಸಗೀಕರಣ ಮಾಡಿದ್ದಾಗ ಆರು ಏರ್‌ಪೋರ್ಟ್‌ಗಳನ್ನು ಅದಾನಿ ಸಮೂಹ ಬಿಡ್‌ನಲ್ಲಿ ಗೆದ್ದುಕೊಂಡಿತ್ತು.
ಇನ್ನು ಕೆಲ ವರ್ಷಗಳಲ್ಲಿ ಸುಮಾರು 12 ರಷ್ಟು ಏರ್‌ಪೋರ್ಟ್‌ಗಳನ್ನು ಕೇಂದ್ರ ಸರ್ಕಾರವು ಖಾಸಗೀಕರಣ ಮಾಡಲು ಉದ್ದೇಶಿಸಿದ್ದು, ಈ ಬಿಡ್‌ನಲ್ಲಿ ಅದಾನಿ ಸಮೂಹ ಪಾಲ್ಗೊಳ್ಳಲಿದೆ ಎಂದು ಬನ್ಸಾಲ್ ಹೇಳಿದ್ದಾರೆ.
ಸದ್ಯ ಮಂಗಳೂರು, ತಿರುವನಂತಪುರಂ ಸಹಿತ ದೇಶದ ಎಂಟು ಏರ್‌ಪೋರ್ಟ್‌ಗಳನ್ನು ಅದಾನಿ ಸಮೂಹಕ್ಕೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.