ADVERTISEMENT

ನವೀಕರಿಸಬಲ್ಲ ಇಂಧನ: ₹ 6.24 ಲಕ್ಷ ಕೋಟಿ ಹೂಡಿಕೆ- ಗೌತಮ್ ಅದಾನಿ

ಪಿಟಿಐ
Published 6 ಡಿಸೆಂಬರ್ 2023, 16:26 IST
Last Updated 6 ಡಿಸೆಂಬರ್ 2023, 16:26 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ನವದೆಹಲಿ: ನವೀಕರಿಸಬಲ್ಲ ಇಂಧನ ತಯಾರಿಕೆ ಸಾಮರ್ಥ್ಯವನ್ನು ಹೆಚ್ಚಿಸಲು 2030ರ ವೇಳೆಗೆ ₹6.24 ಲಕ್ಷ ಕೋಟಿ ಹೂಡಿಕೆ ಮಾಡಲು ಅದಾನಿ ಸಮೂಹ ಉದ್ದೇಶಿಸಿದೆ ಎಂದು ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಬುಧವಾರ ತಿಳಿಸಿದ್ದಾರೆ.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕಂಪನಿಯು ನವೀಕರಿಸಬಲ್ಲ ಇಂಧನ ತಯಾರಿಕೆ ಸಾಮರ್ಥ್ಯವನ್ನು 2030ರ ವೇಳೆಗೆ 45 ಗಿಗಾವಾಟ್‌ಗೆ ಹೆಚ್ಚಿಸಲು ಈ ಹೂಡಿಕೆ ನೆರವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಟರ್ಸ್‌: ಬೆಂಗಳೂರಿನಲ್ಲಿ ‘ಕೆಪಬಿಲಿಟಿ ಸೆಂಟರ್’

ADVERTISEMENT

ಬೆಂಗಳೂರು (ಪಿಟಿಐ): ಆರೋಗ್ಯ ಮತ್ತು ಔಷಧ ತಯಾರಿಕೆ ಕ್ಷೇತ್ರದ ಪ್ರಮುಖ ಕಂಪನಿ ವಾಟರ್ಸ್‌ ಕಾರ್ಪೊರೇಷನ್‌ ಬೆಂಗಳೂರಿನಲ್ಲಿ ಜಾಗತಿಕ ಕೆಪಬಿಲಿಟಿ ಸೆಂಟರ್ (ಜಿಸಿಸಿ) ಬುಧವಾರ ಉದ್ಘಾಟನೆಗೊಂಡಿದೆ.

₹133 ಕೋಟಿ ವೆಚ್ಚದಲ್ಲಿ ಬೆಳ್ಳಂದೂರಿನಲ್ಲಿ ಈ ಸೆಂಟರ್ ಸ್ಥಾಪನೆಯಾಗಿದೆ. ಸಾಫ್ಟ್‌ವೇರ್ ಎಂಜಿನಿಯರಿಂಗ್‌, ತಂತ್ರಜ್ಞನ ಮತ್ತು ಉತ್ಪನ್ನ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಕೇಂದ್ರವು ಕೆಲಸ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಉದಿತ್ ಬಾತ್ರಾ ತಿಳಿಸಿದ್ದಾರೆ.

ಜಿಡಿಪಿ ಬೆಳವಣಿಗೆ ಶೇ 6.8ರಷ್ಟು: ಸಿಐಐ ಅಂದಾಜು

ನವದೆಹಲಿ (ಪಿಟಿಐ): ಮೂಲಸೌಕರ್ಯ ಅಭಿವೃದ್ಧಿ ಮತ್ತು ಸುಲಲಿತ ವಹಿವಾಟಿಗೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹೀಗಾಗಿ ಭಾರತದ ಜಿಡಿಪಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)  ಹೇಳಿದೆ.

ಜಿಡಿಪಿಯು ಶೇ 6.5 ರಿಂದ ಶೇ 6.7ರವರೆಗೆ ಬೆಳವಣಿಗೆ ಕಾಣಬಹುದು ಎಂದು ಸಿಐಐ ಈ ಹಿಂದೆ ಹೇಳಿತ್ತು. 2024–25ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 7ಕ್ಕೆ ಏರಿಕೆ ಆಗಬಲ್ಲದು ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.