ನವದೆಹಲಿ (ಪಿಟಿಐ): ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ತನ್ನ ವಿರುದ್ಧ ಪ್ರಕಟಿಸಿರುವ ವರದಿಯು ‘ಪರಿಣಾಮಗಳ ಬಗ್ಗೆ ಅರಿವಿದ್ದು ಭಾರತದ ಮೇಲೆ, ಅದರ ಸಂಸ್ಥೆಗಳ ಮೇಲೆ ಹಾಗೂ ಬೆಳವಣಿಗೆಯ ಮೇಲೆ ನಡೆಸಿರುವ ದಾಳಿ’ ಎಂದು ಅದಾನಿ ಸಮೂಹ ಬಣ್ಣಿಸಿದೆ.
ಸಂಸ್ಥೆಯ ವರದಿಯಲ್ಲಿ ಇರುವ ಆರೋಪಗಳು ಸುಳ್ಳು ಎಂದು ಸಮೂಹ ಹೇಳಿದೆ. ಅದಾನಿ ಸಮೂವು ಒಟ್ಟು 413 ಪುಟದ ಪ್ರತಿಕ್ರಿಯೆಯನ್ನು ನೀಡಿದೆ.
‘ಇದು ನಿರ್ದಿಷ್ಟ ಕಂಪನಿಯೊಂದರ ಮೇಲಿನ ದಾಳಿ ಮಾತ್ರವೇ ಅಲ್ಲ. ಇದು ದೇಶದ ಮೇಲೆ, ದೇಶದ ಸ್ವಾತಂತ್ರ್ಯದ ಮೇಲೆ, ದೇಶದ ಸಂಸ್ಥೆಗಳ ಗುಣಮಟ್ಟದ ಮೇಲೆ ಹಾಗೂ ದೇಶದ ಮಹತ್ವಾಕಾಂಕ್ಷೆಯ ಮೇಲೆ ನಡೆಸಿದ ದಾಳಿ’ ಎಂದು ಸಮೂಹವು ತೀಕ್ಷ್ಣವಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.