ADVERTISEMENT

ಐಎಎನ್‌ಎಸ್‌: ಶೇ 76 ಷೇರು ಅದಾನಿ ಪಾಲು

ಪಿಟಿಐ
Published 17 ಜನವರಿ 2024, 16:08 IST
Last Updated 17 ಜನವರಿ 2024, 16:08 IST
<div class="paragraphs"><p>ಗೌತಮ್ ಅದಾನಿ</p></div>

ಗೌತಮ್ ಅದಾನಿ

   

ನವದೆಹಲಿ: ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಐಎಎನ್‌ಎಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ನಲ್ಲಿ ಶೇ 76ರಷ್ಟು ಷೇರುಗಳನ್ನು ಸ್ವಾಧೀನಕ್ಕೆ ಪಡೆಯುವ ಮೂಲಕ ಸುದ್ದಿಸಂ‌ಸ್ಥೆಯ ಮೇಲೆ ಹಿಡಿತ ಸಾಧಿಸಿದೆ. 

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶೇ 50.50ರಷ್ಟು ಷೇರುಗಳ ಮೇಲೆ ಒಡೆತನ ಸ್ಥಾಪಿಸಿತ್ತು. ಈಗ ಹೆಚ್ಚುವರಿಯಾಗಿ ಶೇ 25.50ರಷ್ಟು ಷೇರುಗಳನ್ನು ಖರೀದಿಸಿದೆ. ಇದಕ್ಕಾಗಿ ₹5 ಕೋಟಿ ವಿನಿಯೋಗಿಸಿದೆ. 

ADVERTISEMENT

ಜನವರಿ 16ರಂದು ನಡೆದ ಐಎಎನ್‌ಎಸ್‌ ನಿರ್ದೇಶಕರ ಮಂಡಳಿ ಸಭೆಯು ಷೇರು ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ ಎಂದು ಅದಾನಿ ಕಂಪನಿ ತಿಳಿಸಿದೆ.

ಐಎಎನ್‌ಎಸ್‌ನ ಒಟ್ಟು ಷೇರು ಬಂಡವಾಳ ₹11 ಕೋಟಿ ಇದೆ. 2023–24ರ ಹಣಕಾಸು ವರ್ಷದಲ್ಲಿ ಕ‍ಂಪನಿಯು ₹11.86 ಕೋಟಿ ಲಾಭಗಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.