ನವದೆಹಲಿ: ಫಾರ್ಚೂನ್ ಬ್ರ್ಯಾಂಡ್ ಅಡಿಯಲ್ಲಿ ಮಾರಾಟವಾಗುತ್ತಿರುವ ಅಡುಗೆ ಎಣ್ಣೆಗಳ ಮೇಲಿನ ದರವನ್ನು ಲೀಟರಿಗೆ ₹ 30ರವರೆಗೆ ಇಳಿಕೆ ಮಾಡಿರುವುದಾಗಿ ಅದಾನಿ ವಿಲ್ಮರ್ ಕಂಪನಿ ಸೋಮವಾರ ತಿಳಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಆಗಿರುವುದನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಹೊಸ ದರ ನಮೂದಾಗಿರುವ ಅಡುಗೆ ಎಣ್ಣೆಗಳು ಶೀಘ್ರವೇ ಮಾರುಕಟ್ಟೆಗೆ ಬರಲಿವೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಂಗ್ಶು ಮಲ್ಲಿಕ್ ಹೇಳಿದ್ದಾರೆ.
ಮದರ್ ಡೈರಿ ಕಂಪನಿಯು ‘ಧಾರಾ’ ಬ್ರ್ಯಾಂಡ್‌ನ ಸೋಯಾ ಹಾಗೂ ರೈಸ್ ಬ್ರಾನ್ ಎಣ್ಣೆಗಳ ಬೆಲೆಯನ್ನು ಜುಲೈ 7ರಂದು ಲೀಟರಿಗೆ ₹ 14ರವರೆಗೆ ತಗ್ಗಿಸಿದೆ.
ದರ ಬದಲಾವಣೆ (ಪ್ರತಿ ಲೀಟರಿಗೆ)
ಹಾಲಿ ದರ; ಪರಿಷ್ಕೃತ ದರ
ಫಾರ್ಚೂನ್ ಸೊಯಾಬೀನ್; ₹195 ₹165
ಸೂರ್ಯಕಾಂತಿ ಎಣ್ಣೆ; ₹210 ₹199
ಸಾಸಿವೆ ಎಣ್ಣೆ; ₹195 ₹190
ಕಡಲೆಕಾಯಿ ಎಣ್ಣೆ; ₹220 ₹210
ರೈಸ್ ಬ್ರಾನ್ ಎಣ್ಣೆ ₹225 ₹210
ರಾಗ್ ವನಸ್ಪತಿ; ₹200 ₹185
ರಾಗ್ ಪಾಮೊಲಿನ್ ₹170 ₹144
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.