ADVERTISEMENT

ಅದಾನಿ ವಿಲ್ಮರ್‌ನಿಂದ ಓಂಕಾರ್‌ ಕೆಮಿಕಲ್ಸ್‌ ಷೇರು ಖರೀದಿ

ಪಿಟಿಐ
Published 12 ಜುಲೈ 2024, 15:42 IST
Last Updated 12 ಜುಲೈ 2024, 15:42 IST
<div class="paragraphs"><p>&nbsp;ಅದಾನಿ ವಿಲ್ಮರ್‌</p></div>

 ಅದಾನಿ ವಿಲ್ಮರ್‌

   

ನವದೆಹಲಿ: ಅಡುಗೆ ಎಣ್ಣೆ ಮಾರಾಟ ಮಾಡುವ ಅದಾನಿ ಸಮೂಹದ ಅದಾನಿ ವಿಲ್ಮರ್‌ ಲಿಮಿಟೆಡ್‌ (ಎಡಬ್ಲ್ಯುಎಲ್‌) ಓಂಕಾರ್‌ ಕೆಮಿಕಲ್ಸ್‌ ಇಂಡಸ್ಟ್ರೀಸ್‌ನ ಶೇ 67ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. 

ಷೇರುಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಸ್ವಾಧೀನ ಪ್ರಕ್ರಿಯೆ 3–4 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ.

ADVERTISEMENT

ಗುಜರಾತ್‌ನ ಪನೋಲಿಯಲ್ಲಿ ಓಂಕಾರ್‌ ಕೆಮಿಕಲ್ಸ್‌ನ ತಯಾರಿಕಾ ಘಟಕವಿದೆ. 

ಅದಾನಿ ವಿಲ್ಮರ್ ಕಂಪನಿಯು ಅದಾನಿ ಸಮೂಹ ಮತ್ತು ಸಿಂಗಪುರದ ವಿಲ್ಮರ್ ಸಮೂಹದ ನಡುವಿನ ಜಂಟಿ ಉದ್ಯಮವಾಗಿದೆ. ಅದಾನಿ ವಿಲ್ಮರ್‌ ಭಾರತದ ಪ್ರಮುಖ ಎಫ್‌ಎಂಸಿಜಿ ಕಂಪನಿಯಾಗಿದ್ದು, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಅಕ್ಕಿ, ಧಾನ್ಯಗಳು, ಕಡಲೆ ಹಿಟ್ಟು, ಸಕ್ಕರೆ ಸೇರಿದಂತೆ ಅಡುಗೆ ಪದಾರ್ಥಗಳನ್ನು ಮಾರಾಟ ಮಾಡುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.