ADVERTISEMENT

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಲಸಿಕೆಗಾಗಿ ಎಡಿಬಿಯಿಂದ ₹66 ಸಾವಿರ ಕೋಟಿಯ ನಿಧಿ

ಪಿಟಿಐ
Published 11 ಡಿಸೆಂಬರ್ 2020, 11:14 IST
Last Updated 11 ಡಿಸೆಂಬರ್ 2020, 11:14 IST
   

ನವದೆಹಲಿ: ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಕೋವಿಡ್–19 ಲಸಿಕೆ ಖರೀದಿಸಲು ಹಾಗೂ ಲಸಿಕೆಯನ್ನು ವಿತರಿಸಲು ನೆರವಾಗುವ ಉದ್ದೇಶದಿಂದ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ಒಟ್ಟು ₹ 66 ಸಾವಿರ ಕೋಟಿ ಮೊತ್ತದ ನಿಧಿಯೊಂದನ್ನು ಆರಂಭಿಸಿರುವುದಾಗಿ ಹೇಳಿದೆ.

‘ಅಭಿವೃದ್ಧಿ ಹೊಂದುತ್ತಿರುವ ಎಡಿಬಿ ಸದಸ್ಯ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ನೀಡಲು ಸಿದ್ಧತೆ ನಡೆಸುತ್ತಿವೆ. ಈ ದೇಶಗಳಿಗೆ ಲಸಿಕೆ ಖರೀದಿಸಲು ಹಣಕಾಸಿನ ನೆರವು ಹಾಗೂ ಲಸಿಕೆಯನ್ನು ಜನರಿಗೆ ನೀಡಲು ಸೂಕ್ತ ಯೋಜನೆಗಳ ಅವಶ್ಯಕತೆ ಇದೆ’ ಎಂದು ಎಡಿಬಿ ಅಧ್ಯಕ್ಷ ಮಸಾತ್ಸುಗು ಅಸಕಾವಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT