ಮುಂಬೈ:ಡಿಸೆಂಬರ್‌ನಿಂದ ಮೊಬೈಲ್ ಸೇವಾ ದರಗಳನ್ನು ಹೆಚ್ಚಿಸಲು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಿರ್ಧರಿದ ಬೆನ್ನಲ್ಲೇ ರಿಲಯನ್ಸ್ ಜಿಯೊ ಸಹ ಶೀಘ್ರದಲ್ಲೇಕರೆ ಮತ್ತು ಡೇಟಾ ಶುಲ್ಕ ಹೆಚ್ಚಿಸುವ ಸುಳಿವು ನೀಡಿದೆ.
‘ಮುಂದಿನ ಕೆಲವು ವಾರಗಳಲ್ಲಿ ಕರೆ ಮತ್ತು ಡೇಟಾ ಶುಲ್ಕ ಹೆಚ್ಚಳ ಮಾಡಲಿದ್ದೇವೆ. ಜತೆಗೆ, ದೂರಸಂಪರ್ಕ ಉದ್ದಿಮೆಯನ್ನು ಗಟ್ಟಿಗೊಳಿಸುವುದಕ್ಕಾಗಿ ಮತ್ತು ಈ ಕ್ಷೇತ್ರದಲ್ಲಿನ ಹೂಡಿಕೆ ಹೆಚ್ಚಿಸುವ ಸಲುವಾಗಿದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡುವ ಇತರ ಕ್ರಮಗಳನ್ನೂ ಅನುಷ್ಠಾನಕ್ಕೆ ತರಲಿದ್ದೇವೆ’ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
ಡೇಟಾ ಪ್ಯಾಕ್ ಹೊಂದಿದವರಿಗೆ ಉಚಿತ ಕರೆ ಸೌಲಭ್ಯ ನೀಡುತ್ತಿದ್ದ ಜಿಯೊ ಇತ್ತೀಚೆಗೆ ಅದನ್ನು ರದ್ದುಪಡಿಸಿತ್ತು. ಇದೀಗ ಬೇರೆ ನೆಟ್‌ವರ್ಕ್‌ಗೆ ವಾಯ್ಸ್ ಕಾಲ್ ಮಾಡುವ ಗ್ರಾಹಕರಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲಾಗುತ್ತಿದೆ.
‘ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿ ಟ್ರಾಯ್ ಶೀಘ್ರದಲ್ಲೇ ಸಮಾಲೋಚನೆ ಆರಂಭಿಸುವ ಸಾಧ್ಯತೆ ಇದೆ. ಇತರ ಕಂಪನಿಗಳಂತೆಯೇ ನಾವು ಸಹ ಸರ್ಕಾರದ ಜತೆ ಕೆಲಸ ಮಾಡಲಿದ್ದೇವೆ. ಭಾರತೀಯ ಗ್ರಾಹಕರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದರ ಜತೆಗೆ ದೂರಸಂಪರ್ಕ ಉದ್ಯಮವನ್ನೂ ಬಲಪಡಿಸುವುದಕ್ಕಾಗಿ ಕ್ರಮ ಕೈಗೊಳ್ಳಲಿದ್ದೇವೆ. ಇದರಿಂದ ಡೇಟಾ ಬಳಕೆ ಮತ್ತು ಡಿಜಿಟಲ್ ಅಳವಡಿಕೆ ಮೇಲೆ ಪ್ರತಿಕೂಲ ಪರಿಣಾಮವಾಗದು. ಹೂಡಿಕೆಯನ್ನೂ ಹಿಡಿದಿಟ್ಟುಕೊಳ್ಳಬಹುದು’ ಎಂದು ಜಿಯೊ ತಿಳಿಸಿದೆ.
ಇದನ್ನೂ ಓದಿ:ವೊಡಾಫೋನ್, ಏರ್‌ಟೆಲ್ ನಷ್ಟ ₹ 74 ಸಾವಿರ ಕೋಟಿ
ಏರ್‌ಟೆಲ್, ವೊಡಾಫೋನ್, ಎಂಟಿಎನ್‌ಎಲ್ ಮತ್ತು ಬಿಎಸ್‌ಎನ್‌ಎಲ್ ಸೇರಿದಂತೆ ಪ್ರಮುಖ ದೂರಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ₹ 92,642 ಕೋಟಿ ಬಾಕಿ ಇರಿಸಿಕೊಂಡಿವೆ.ಏರ್‌ಟೆಲ್, ವೊಡಾಫೋನ್ ಕಂಪನಿಗಳು₹ 74 ಸಾವಿರ ಕೋಟಿ ನಷ್ಟ ಅನುಭವಿಸುತ್ತಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ, ದೂರಸಂಪರ್ಕ ಉದ್ದಿಮೆಯ ಉತ್ತೇಜನಕ್ಕಾಗಿ ಶುಲ್ಕ ಹೆಚ್ಚಳ ಸೇರಿದಂತೆ ಹಲವು ಶಿಫಾರಸುಗಳನ್ನು ಟ್ರಾಯ್ ಮಾಡಿದೆ ಎನ್ನಲಾಗಿದೆ.
ಡಿಸೆಂಬರ್‌ನಿಂದ ಮೊಬೈಲ್ ಸೇವಾ ದರಗಳನ್ನು ಹೆಚ್ಚಿಸುವುದಾಗಿ ಘೋಷಿಸಿದ ಬಳಿಕಟೆಲಿಕಾಂ ಕಂಪನಿಗಳ ಷೇರುಗಳಲ್ಲಿ ಸಕಾರಾತ್ಮ ವಹಿವಾಟು ದಾಖಲಾಗಿದೆ.ಏರ್‌ಟೆಲ್ ಮತ್ತು ವೊಡಾಫೋನ್ ಷೇರುಗಳು ಮಂಗಳವಾರ ದಾಖಲೆ ಏರಿಕೆ ಕಂಡಿವೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.