ನವದೆಹಲಿ: ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಲ್ಲಿ ಬಾಸ್ಮತಿ ಅಕ್ಕಿ ಸೇರಿದಂತೆ ಕೃಷಿ ಸರಕುಗಳ ರಫ್ತು 17.93 ಲಕ್ಷ ಟನ್‌ನಷ್ಟು ಇಳಿಕೆಯಾಗಿದೆ.
ಆಗಸ್ಟ್‌ನಲ್ಲಿ ಕೃಷಿ ಸರಕುಗಳ ರಫ್ತು 27.94 ಲಕ್ಷ ಟನ್‌ಗಳಷ್ಟಿತ್ತು ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ತಿಳಿಸಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೃಷಿ ಸರಕುಗಳ ರಫ್ತು ತಲಾ 33 ಲಕ್ಷ ಟನ್‌ಗಳಷ್ಟಿತ್ತು. ಆದಾಗ್ಯೂ, ಬಾಸ್ಮತಿ ಹೊರತುಪಡಿಸಿ ಇತರೆ ತಳಿಯ ಅಕ್ಕಿಯ ರಫ್ತಿನ ಮೇಲಿನ ಹಲವಾರು ನಿರ್ಬಂಧಗಳಿಂದಾಗಿ ಕೃಷಿ ವಸ್ತುಗಳ ಸಾಗಣೆ ಸುಮಾರು 18 ಲಕ್ಷ ಟನ್‌ಗಳಿಗೆ ಇಳಿಕೆಯಾಗಿತ್ತು.
ಆಗಸ್ಟ್‌ನಲ್ಲಿ ₹18,128 ಕೋಟಿ ಇದ್ದ ರಫ್ತು ಮೌಲ್ಯವು ಸೆಪ್ಟೆಂಬರ್‌ನಲ್ಲಿ ₹ 14,153 ಕೋಟಿಗೆ ಇಳಿಕೆಯಾಗಿದೆ.
ಸೆಪ್ಟೆಂಬರ್‌ನಲ್ಲಿ ಬಾಸ್ಮತಿ ಅಕ್ಕಿ 1.21 ಲಕ್ಷ ಟನ್, ಈರುಳ್ಳಿ 1.51 ಲಕ್ಷ ಟನ್ ಮತ್ತು ಎಮ್ಮೆ ಮಾಂಸ 1.21 ಲಕ್ಷ ಟನ್ ರಫ್ತಾಗಿತ್ತು ಎಂದು ಅಂಕಿ–ಅಂಶಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.