ದೆಹಲಿ: ಇತ್ತೀಚಿಗೆ ನಡೆದ ಹರಾಜಿನಲ್ಲಿ ₹18,699 ಕೋಟಿ ಮೌಲ್ಯದ ರೇಡಿಯೊ ತರಂಗಗಳನ್ನು ತನ್ನದಾಗಿಸಿಕೊಂಡಿರುವುದಾಗಿ ಟೆಲಿಕಾಂ ಕಂಪೆನಿ ಭಾರ್ತಿ ಏರ್‌ಟೆಲ್ ಮಂಗಳವಾರ ತಿಳಿಸಿದೆ.
ಟೆಲಿಕಾಂ ಇಲಾಖೆ ನಡೆಸಿದ ಹರಾಜಿನಲ್ಲಿ, ಸಬ್‌ಗಿಗಾಹರ್ಟ್ಸ್‌ನಲ್ಲಿ 355.45 ಮೆಗಾಹರ್ಟ್ಸ್ ಸ್ಪೆಕ್ಟ್ರಮ್, ಮಿಡ್ ಬ್ಯಾಂಡ್ ಮತ್ತು 2300 ಮೆಗಾಹರ್ಟ್ಸ್ ಬ್ಯಾಂಡ್‌ಗಳನ್ನು ಒಟ್ಟು ₹18,699 ಕೋಟಿಗೆ ಪಡೆಯಲಾಗಿದೆ. ಇದು ದೇಶದಲ್ಲೇ ಅಸಾಧಾರಣ ತರಂಗಾಂತರ ಸ್ವಾಮ್ಯವಾಗಿದೆ ಎಂದು ಏರ್‌ಟೆಲ್ ತಿಳಿಸಿದೆ.
ಈ ಎಲ್ಲಾ ತರಂಗಗಳೂ ಭವಿಷ್ಯದಲ್ಲಿ 5ಜಿ ಸೇವೆ ಒದಗಿಸಲು ಏರ್‌ಟೆಲ್‌ಗೆ ಅನುವು ಮಾಡಿಕೊಡುತ್ತವೆ ಎಂದು ಕಂಪನಿ ಹೇಳಿದೆ.
700 ಮೆಗಾಹರ್ಟ್ ಬ್ಯಾಂಡ್‌ಗೆ ಹೆಚ್ಚಿನ ಮೀಸಲು ಬೆಲೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಆಪರೇಟರ್‌ಗಳಿಂದ ಯಾವುದೇ ಬಿಡ್ ಬರಲಿಲ್ಲ ಎಂದೂ ಏರ್‌ಟೆಲ್ ತಿಳಿಸಿದೆ.
ಕಂಪನಿಯು ಈಗ 'ಪ್ರಬಲ ಸ್ಪೆಕ್ಟ್ರಮ್ ಸ್ವಾಮ್ಯವನ್ನು ಹೊಂದಿದೆ. ಇದು ಭಾರತದಲ್ಲಿ ಅತ್ಯುತ್ತಮ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಸಹಕಾರಿಯಾಗುತ್ತದೆ,' ಎಂದು ಭಾರ್ತಿ ಏರ್‌ಟೆಲ್‌ನ ಭಾರತ ಮತ್ತು ದಕ್ಷಿಣ ಏಷ್ಯಾ ಎಂಡಿ-ಸಿಇಒ ಗೋಪಾಲ್ ವಿಠಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.