ನವದೆಹಲಿ: ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ಲಾಭವು 2022–23ನೇ ಹಣಕಾಸು ವರ್ಷದಲ್ಲಿ ₹21.7 ಕೋಟಿಗೆ ತಲುಪಿದೆ. 2021–22ನೇ ಹಣಕಾಸು ವರ್ಷದಲ್ಲಿ ಲಾಭವು ₹9.2 ಕೋಟಿಯಷ್ಟು ಇತ್ತು.
ಕಂಪನಿಯ ವರಮಾನವು ಶೇ 37ರಷ್ಟು ಹೆಚ್ಚಾಗಿ ₹1,291 ಕೋಟಿಗೆ ತಲುಪಿದೆ. ಹಿಂದಿನ ಅವಧಿಯಲ್ಲಿ ವರಮಾನ ₹941 ಕೋಟಿಯಷ್ಟು ಇತ್ತು. ಕಂಪನಿಯ ಸರಾಸರಿ ವಾಣಿಜ್ಯ ಮೌಲ್ಯವು (ಜಿಎಂವಿ) ₹2.01 ಲಕ್ಷ ಕೋಟಿಯಷ್ಟು ಇದೆ.
ಡಿಜಿಟಲ್ ಸೇವೆಗಳನ್ನು ನೀಡುವಲ್ಲಿ ಮತ್ತು ವಿತ್ತೀಯ ಒಳಗೊಳ್ಳುವಿಕೆಯಲ್ಲಿ ಪೇಮೆಂಟ್ಸ್ ಬ್ಯಾಂಕ್‌ನ ಪಾತ್ರವನ್ನು ಈ ಫಲಿತಾಂಶವು ಸ್ಪಷ್ಟಪಡಿಸಿದೆ ಎಂದು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನುಬ್ರತಾ ಬಿಸ್ವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.